ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕರ್ನಾಟಕ-ಗೋವಾ ಗಡಿ ಕ್ಯಾಸಲ್ ರಾಕ್ ಪ್ರದೇಶದ ಬಳಿ ಇದೀಗ ಮತ್ತೆ ಗುಡ್ಡ ಕುಸಿತ ಉಂಟಾಗಿದ್ದು, ರೈಲು ಸಂಚಾರ ಸ್ಥಗಿತವಾಗಿದೆ.
ಹಳಿ ಮೇಲಿನ ಗುಡ್ಡ ತೆರವು ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ, ಆದರೆ ಗುಡ್ಡ ತೆರವು ಆಯ್ತು ಎನ್ನುವಷ್ಟರಲ್ಲಿ ಮತ್ತೆ ಭೂಕುಸಿತ ಉಂಟಾಗುತ್ತಿದೆ.
ಕ್ಯಾಸಲ್‌ರಾಕ್‌ನಿಂದ ದೂಧ್‌ಸಾಗರ್‌ವರೆಗೂ ಪ್ರವಾಸಿಗರಿಗೆ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇದರ ಜತೆಗೆ ಬೆಳಗಾವಿ ಮಾರ್ಗವಾಗಿ ತೆರಳುವ ರೈಲುಗಳ ಸಂಚಾರವನ್ನೂ ರದ್ದು ಮಾಡಲಾಗಿದೆ.