ಸಿರಿಯಾದಲ್ಲಿ ಭೀಕರ ಸ್ಫೋಟ: 6 ಮಂದಿ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿರಿಯಾದಲ್ಲಿ ಗುರುವಾರ ರಾತ್ರಿ ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು 23ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಸಿರಿಯನ್ ಅರಬ್ ನ್ಯೂಸ್ ಏಜೆನ್ಸಿ (ಸಾನಾ) ವರದಿ ಮಾಡಿದೆ.

ಸುದ್ದಿ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ, ಈ ಸ್ಫೋಟವು ಡಮಾಸ್ಕಸ್ ಗ್ರಾಮಾಂತರದಲ್ಲಿರುವ ಅಸ್ಸಾಯಿದಾ ಜೈನಾಬ್ ಪಟ್ಟಣದಲ್ಲಿ ನಡೆದಿದೆ. ಸಯ್ಯಿದಾ ಜೈನಾಬ್‌ನ ಕೌ ಸುಡಾನ್ ಸ್ಟ್ರೀಟ್‌ನಲ್ಲಿ ಟ್ಯಾಕ್ಸಿ ಬಳಿ ಮೋಟಾರ್‌ಸೈಕಲ್ ಅನ್ನು ಇಟ್ಟು ಸ್ಫೋಟಿಸಲಾಗಿದೆ ಎಂದು ತಿಳಿದುಬಂದಿದೆ.

ಈ ದುರಂತದಲ್ಲಿ ಸಾವಿಗೀಡಾದ ಮೃತರ ದೇಹಗಳನ್ನು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ಆಂತರಿಕ ಸಚಿವಾಲಯವು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!