ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯದ ವಿಸಿ ನಾಲೆಗೆ ಕಾರು ಸಮೇತ ಬಿದ್ದಿದ್ದ ಚಾಲಕನ ಮೃತದೇಹ ಇಂದು ಪತ್ತೆಯಾಗಿದೆ.
ಮಂಡ್ಯದ ತಿಬ್ಬನಹಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ನಾಲೆಗೆ ಉರುಳಿ ಬಿದ್ದಿತ್ತು, ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದರು, ಆದರೆ ಚಾಲಕ ನಾಪತ್ತೆಯಾಗಿದ್ದ ಘಟನೆ ನಿನ್ನೆ ನಡೆದಿತ್ತು. ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆಸಿ ಕಾರನ್ನು ಮೇಲಕ್ಕೆತ್ತಲಾಗಿತ್ತು, ಆದರೆ ಲೋಕೇಶ್ ಶವ ಪತ್ತೆಯಾಗಿರಲಿಲ್ಲ. ಆದರೆ ಇಂದು ದುರಂತ ಸಂಭವಿಸಿದ 1 ಕಿ.ಮೀ ದೂರದಲ್ಲಿ ಚಾಲಕ ಲೋಕೇಶ್ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.
ಘಟನೆಯ ವಿವರ:
ನಿನ್ನೆ ಲೋಕೇಶ್ ಎಂಬಾತ ಕಾರು ಚಲಿಸಿಕೊಂಡು ಬರುತ್ತಿದ್ದನು. ಆದರೆ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿಯೇ ತುಂಬಿ ಹರಿಯುತ್ತಿದ್ದ ನಾಲೆಯೊಳಗೆ ಬಿದ್ದಿದೆ. ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಅಪಘಾತ ನಡೆಯುತ್ತಿದ್ದಂತೆ ಕಾರಿನ ಕಿಟಕಿ ಗಾಜು ಒಡೆದು ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದನು. ಆದರೆ ನಾಪತ್ತೆಯಾದ ಚಾಲಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿತ್ತು. ಮಂಡ್ಯ ತಾಲೂಕಿನ ಶಿವಹಳ್ಳಿ ಗ್ರಾಮದವರಾಗಿರುವ ಲೋಕೇಶ್ (45) ದುರಂತದಲ್ಲಿ ಸಾವಿಗೀಡಾಗಿದ್ದಾರೆ.