ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ವಿಜಯ್ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಎಲ್ಲರ ಫೇವರೆಟ್. ಆನ್ಸ್ಕ್ರೀನ್ನಲ್ಲಿ ಇವರಿಬ್ಬರ ಜೋಡಿ ಎಲ್ಲರಿಗೂ ಇಷ್ಟ.
ಆನ್ಸ್ಕ್ರೀನ್ ಅಷ್ಟೇ ಅಲ್ಲದೆ ಇವರಿಬ್ಬರು ರಿಯಲ್ ಕಪಲ್ ಅನ್ನೋ ಸುದ್ದಿ ಕೂಡ ಇದೆ. ವಿಜಯ್ ಹಾಗೂ ರಶ್ಮಿಕಾ ತೆಲುಗಿನ ಗೀತಾ ಗೋವಿಂದಂ ಸಿನಿಮಾದಿಂದ ಸಾಕಷ್ಟು ಹೆಸರು ಮಾಡಿದ್ದರು.
ಸಿನಿಮಾ ಸೂಪರ್ ಹಿಟ್ ಕೂಡ ಆಗಿತ್ತು. ಜೋಡಿ ಹಿಟ್ ಆಗಿದ್ದೇ ತಡ ಇಬ್ಬರು ಡಿಯರ್ ಕಾಮ್ರೆಡ್ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಆದರೆ ಸಿನಿಮಾ ಅಷ್ಟೇನು ಹಿಟ್ ಆಗಲಿಲ್ಲ. ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿದ್ದು, ರಶ್ಮಿಕಾ ವಿಜಯ್ ಕೆಮೆಸ್ಟ್ರಿ ಎಲ್ಲರಿಗೂ ಇಷ್ಟವಾಗಿತ್ತು.
ಇದೀಗ ವಿಜಯ್ ಹಾಗೂ ರಶ್ಮಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ವಿಜಯ್ ೨ ಸಿನಿಮಾ ಮುಗಿಸಿ ಈ ಸಿನಿಮಾಗೆ ಸಮಯ ನೀಡಬೇಕಿದೆ, ಇನ್ನು ರಶ್ಮಿಕಾ ಕೂಡ ಬಾಲಿವುಡ್ನಲ್ಲಿ ಬ್ಯುಸಿ ಇದ್ದಾರೆ. ಕಮಿಟ್ಮೆಂಟ್ಸ್ ಮುಗಿಸಿ ಶೂಟಿಂಗ್ ಡೇಟ್ ನೀಡಲಿದ್ದಾರೆ.