ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಲಿವಿಷನ್ ಕ್ಷೇತ್ರದಲ್ಲಿ ಹೆಸರು ಮಾಡಿ, ಬಿಗ್ ಬಾಸ್ ಮನೆಗೂ ಕಾಲಿಟ್ಟಿದ್ದ ನಟಿ, ಆಂಕರ್ ಚೈತ್ರಾ ವಾಸುದೇವನ್ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ವಿಚ್ಛೇದನ ಪಡೆದು ತಿಂಗಳುಗಳ ನಂತರ ಚೈತ್ರಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಡಿವೋರ್ಸ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಚೈತ್ರಾ ತಮ್ಮ ಪತಿಯ ಫೋಟೊ ಎಲ್ಲಿಯೂ ತೋರಿಸೋದಿಲ್ಲ. ಅವರನ್ನು ಎಲ್ಲಿಯೂ ಕರೆದುಕೊಂಡು ಬಂದಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆಯೇ ಚೈತ್ರಾ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ.
ತುಂಬಾ ಧೈರ್ಯ ತೆಗೆದುಕೊಂಡು ನಿಮ್ಮ ಮುಂದೆ ನಿಂತಿದ್ದೇನೆ, ನಾನು ನನ್ನ ಪತಿ ಸತ್ಯ ವಿಚ್ಛೇದನ ಪಡೆದಿದ್ದೇವೆ, ಈವೆಂಟ್ ಒಂದರಲ್ಲಿ ನನ್ನನ್ನು ನೋಡಿ ಇಷ್ಟಪಟ್ಟು ಉದ್ಯಮಿ ಸತ್ಯ ನನ್ನನ್ನು ಮದುವೆಯಾಗಿದ್ದರು. ಆರು ವರ್ಷದ ದಾಂಪತ್ಯಕ್ಕೆ ಕೊನೆಹಾಡಿದ್ದೇವೆ. ಇದು ಕಷ್ಟದ ಸಮಯ, ಯಾರೂ ನನ್ನನ್ನು ದ್ವೇಷ ಮಾಡಬೇಡಿ, ನನ್ನ ಕೆಲಸವೇ ಸದ್ಯ ನನಗಿರುವ ಸಮಾಧಾನ, ಇದನ್ನು ಮುಂದುವರಿಸಲು ಇಚ್ಛಿಸುತ್ತೇನೆ. ಮತ್ತಷ್ಟು ಪ್ರೀತಿ ನೀಡಿ ಎಂದು ಚೈತ್ರಾ ಹೇಳಿದ್ದಾರೆ.