Sunday, December 21, 2025

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ: ಸಂಚಾರ ಅಂತರದಲ್ಲಿ ಬದಲಾವಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ತೊಂದರೆಯಿಂದಾಗಿ ರೈಲು ಅರ್ಧಗಂಟೆಯಿಂದ ನಿಂತಲ್ಲೇ ನಿಂತಿದೆ. ಹೀಗಾಗಿ ಪ್ರಯಾಣಿಕರು ಪರದಾಡುವಂತೆ ಆಗಿದೆ.

ಇಂದು ಸಂಜೆ 4:45 ರಿಂದ ಒಂದು ರೈಲಿನ ಸಂಚಾರ ಸ್ಥಗಿತಗೊಂಡಿದ್ದು ಸಾಮಾನ್ಯ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲು ನಮ್ಮ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬಿಎಂಆರ್‌ಸಿಎಲ್‌ (BMRCL) ತಿಳಿಸಿದೆ.

ಒಂದು ರೈಲಿನ ಸಂಚಾರ ಸ್ಥಗಿತಗೊಂಡಿದ್ದರಿಂದ ಈ ಮಾರ್ಗದಲ್ಲಿ 15 ನಿಮಿಷದ ಬದಲಾಗಿದೆ 19 ನಿಮಿಷದ ಅಂತರದಲ್ಲಿ ರೈಲುಗಳು ಈಗ ಸಂಚರಿಸುತ್ತಿವೆ. ದುರಸ್ಥಿ ಮಾಡಿದ ಬಳಿಕ ಎಂದಿನಂತೆ 15 ನಿಮಿಷದಲ್ಲಿ ರೈಲು ಸಂಚಾರ ಮಾಡಲಿದೆ.

error: Content is protected !!