ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ದಶಪಥ ರಸ್ತೆಯನ್ನು ವೀಕ್ಷಿಸಲಿದ್ದಾರೆ.
ಸಿಎಂ ಆದ ನಂತರ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಗೆ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದು, ಉಮ್ಮಡಹಳ್ಳಿ ಗೇಟ್ ಬಳಿ ಹೆದ್ದಾರಿ ವೀಕ್ಷಣೆ ಮಾಡಲಿದ್ದಾರೆ. ಇದಕ್ಕಾಗಿ 360 ಡಿಗ್ರಿ ಕ್ಯಾಮೆರಾ ಬಳಸಲಿದ್ದಾರೆ.
ಇದಾದ ನಂತರ ಮೈಸೂರಿಗೆ ತೆರಳಲಿದ್ದು, ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಮಂಡ್ಯ ಮತ್ತು ರಾಮನಗರ ನಡುವಿನ ಮಾರ್ಗದಲ್ಲೇ ಹೆಚ್ಚು ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ವರದಿ ಹೊರಬಿದ್ದಿದ್ದು, ಅಪಘಾತಗಳು ಹೆಚ್ಚಾದ ಹಿನ್ನೆಲೆ ಸಿಎಂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಅಪಘಾತ ತಪ್ಪಿಸಲು ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇನಲ್ಲಿ ಎಐ ಕ್ಯಾಮೆರಾ ಅಳವಡಿಸಿದ್ದರು, ಸ್ಪೀಡಾಗಿ ಗಾಡಿ ಓಡಿಸಿದವರಿಗೆ ದಂಡ ಬೀಳೋದು ಗ್ಯಾರೆಂಟಿ ಎನ್ನಲಾಗಿದೆ. ಎಐ ಕ್ಯಾಮೆರಾ ಅಳವಡಿಕೆಯಿಂದಾಗಿ ರಸ್ತೆ ಸುರಕ್ಷತೆ ಹೆಚ್ಚಾಗಿದೆ.