ಹುಲಿಮರಿಗಳಿಗೆ ನಾಮಕರಣ: ಯಾರ ಹೆಸರಿಟ್ಟರು ರಾಜಸ್ಥಾನ ಸಿಎಂ?

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಅಂತರಾಷ್ಟ್ರೀಯ ಹುಲಿ ದಿನದ ಸಂದರ್ಭದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಣಥಂಬೋರ್ ಅಭಯಾರಣ್ಯದ ಹುಲಿ ಮರಿಗಳಿಗೆ ನಾಮಕರಣ ಮಾಡಿದರು. ರಾಜಸ್ಥಾನದ ಹುಲಿ ಮರಿಗೆ ಪ್ಯಾರಾ ಒಲಿಂಪಿಕ್ ಪದಕ ವಿಜೇತೆ ಅವ್ನಿ ಲೆಖರಾ ಹೆಸರನ್ನು ಇಡಲಾಗಿದೆ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ. ಇನ್ನೂ ಎರಡು ಹುಲಿ ಮರಿಗಳಿಗೆ ಚಿರಂಜೀವಿ ಮತ್ತು ಚಿರಾಯು ಎಂದು ಹೆಸರಿಡಲಾಗಿದೆ.

Avani Lekhara Paralympics: Shooter Avani Lekhara becomes first Indian woman to win gold at Paralympics | Tokyo Paralympics News - Times of India

ಕಳೆದ ತಿಂಗಳು ರಾಜಸ್ಥಾನ ರಾಜ್ಯದ ರಣಥಂಬೋರ್ ಅಭಯಾರಣ್ಯದಲ್ಲಿ ಆರು ಹುಲಿ ಮರಿಗಳು ಜನಿಸಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ನವಜಾತ ಹುಲಿ ಮರಿಗೆ ಪ್ಯಾರಾಲಿಂಪಿಕ್ ಪದಕ ವಿಜೇತೆ ಅವನಿಲೇಖಾ ಅವರ ಹೆಸರನ್ನು ಅವನಿ ಎಂದು ಹೆಸರಿಸಿದ್ದೇನೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಟೋಕಿಯೊ 2020 ಪ್ಯಾರಾಲಿಂಪಿಕ್ಸ್‌ನಲ್ಲಿ ಜೈಪುರದ ಅವನಿ ಲೆಖರಾ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್‌ನಲ್ಲಿ ಚಿನ್ನದ ಪದಕ ಮತ್ತು 50 ಮೀಟರ್ ರೈಫಲ್ 3 ಸ್ಥಾನಗಳಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಹುಲಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ರಂದು ಅಂತರರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!