RECIPE| ವಿಭಿನ್ನವಾದ ಸಿಹಿ ಸವಿಯಲು ಮಾಡಿ ನೋಡಿ ಸೋರೆಕಾಯಿ ಬರ್ಫಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿಹಿ ತಿಂಡಿಗಳನ್ನು ತಿಂದು ಬೋರ್‌ ಆಗಿದೆ ಹಾಗಾಗಿ ಸಿಹಿ ತಿನ್ನೋಕೆ ಇಷ್ಟ ಇಲ್ಲ ಎನ್ನುವವರು ಒಮ್ಮೆ ಈ ವಿಭಿನ್ನವಾದ ಸಿಹಿ ತಿನಿಸು ಸೋರೆಕಾಯಿ ಬರ್ಫಿ ಅನ್ನು ಮಾಡಿ ಸವಿದು ನೋಡಿ.

ಬೇಕಾಗುವ ಸಾಮಾಗ್ರಿಗಳು

*ಸೋರೆಕಾಯಿ
*ತುಪ್ಪ
*ಹಾಲು
*ಕೋಯಾ
*ಹಸಿರು ಏಲಕ್ಕಿ ಹುಡಿ
*ಲವಂಗ
*ಸಕ್ಕರೆ
*ಮಿಶ್ರ ಮಾಡಿದ ನಟ್ಸ್ – (ಬಾದಾಮಿ, ದ್ರಾಕ್ಷಿ, ಗೇರುಬೀಜ, ಆಕ್ರೋಡು, ನೆಲಗಡಲೆ)
*ತುರಿದ ತೆಂಗಿನ ಕಾಯಿ
*ಸೂರ್ಯಕಾಂತಿ ಬೀಜ
*ಮೆಲನ್ ಬೀಜ

ಮಾಡುವ ವಿಧಾನ

* ಮೊದಲು ನೆಲಗಡಲೆ ಸಿಪ್ಪೆ ಸುಲಿದುಕೊಂಡು ಬೀಜವನ್ನು ಬಿಡಿಸಿ
* ಈಗ ಸೋರೆಕಾಯಿ ಚೆನ್ನಾಗಿ ತುರಿದುಕೊಳ್ಳಿ
* ಒಂದು ಪ್ಯಾನ್ ತೆಗೆದುಕೊಂಡು ತುಪ್ಪ ಹಾಕಿ ಕರಗಿಸಿಕೊಳ್ಳಿ. ಏಲಕ್ಕಿ ಮತ್ತು ಲವಂಗವನ್ನು ಇದಕ್ಕೆ ಹಾಕಿ ನಂತರ ತುರಿದ ಸೋರೆಕಾಯಿ ಮಿಶ್ರ ಮಾಡಿಕೊಳ್ಳಿ.
* ಸೋರೆಕಾಯಿಯಿಂದ ತುಪ್ಪ ಬೇರ್ಪಡುವವರೆಗೆ ಬೇಯಿಸಿ.
* ಈಗ ತೆಂಗಿನ ತುರಿಯನ್ನು ಬೆರೆಸಿಕೊಂಡು ಬೇಯಿಸಿಕೊಳ್ಳಿ.
* ಕುದಿಸಿದ ಹಾಲನ್ನು ಅದಕ್ಕೆ ಹಾಕಿ ಮತ್ತು ಸಕ್ಕರೆ ಬೆರೆಸಿಕೊಂಡು ಚೆನ್ನಾಗಿ ಎಲ್ಲವನ್ನೂ ಕಲಸಿಕೊಳ್ಳಿ.
* ಈಗ ಕೋಯಾವನ್ನು ಹಾಕಿ ಮತ್ತು ಕತ್ತರಿಸಿದ ನಟ್ಸ್ ಈಗ ಮಿಶ್ರ ಮಾಡಿಕೊಳ್ಳಿ. ಎಲ್ಲವನ್ನು ಚೆನ್ನಾಗಿ ಕಲಸಿಕೊಳ್ಳಿ.
* ಒಂದು ತಟ್ಟೆಯನ್ನು ತೆಗೆದುಕೊಂಡು ತುಪ್ಪವನ್ನು ಸವರಿ. ಈ ಮಿಶ್ರಣವನ್ನು ಸಂಪೂರ್ಣವಾಗಿ ತಟ್ಟೆಗೆ ಹಾಕಿ ಮತ್ತು ತಣ್ಣಗಾಗಲು ಬಿಡಿ.
* ನಂತರ ಬರ್ಫಿ ಆಕಾರದಲ್ಲಿ ಇದನ್ನು ಕತ್ತರಿಸಿಕೊಳ್ಳಿ ನಂತರ ಸೂರ್ಯಕಾಂತಿ ಬೀಜ, ಮೆಲನ್ ಬೀಜ ಮತ್ತು ನಟ್ಸ್‌ನಿಂದ ಅಲಂಕಾರ ಮಾಡಿ.
* ಈಗ ಫ್ರಿಡ್ಜ್‌ನಲ್ಲಿರಿಸಿ, ಸ್ವಲ್ಪ ಸಮಯದ ಬಳಿಕ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!