ಮಾದಕ ವಸ್ತು ಮಾರಾಟ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್!

ಹೊಸದಿಗಂತ ವರದಿ, ಮಡಿಕೇರಿ:‌

ನಿಷೇಧಿತ ಮಾದಕ ವಸ್ತುಗಳ ಸರಬರಾಜು/ಮಾರಾಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ನಾಪೋಕ್ಲು ಸಮೀಪದ ಕೊಟ್ಟಮುಡಿ ನಿವಾಸಿ ರಿಜ್ವಾನ್.ಎಂ.ಎ (26) ಎಂಬಾತನೇ ಬಂಧಿತ ಆರೋಪಿ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತುಗಳ ಸರಬರಾಜು/ಮಾರಾಟ/ಬಳಕೆ ಬಗ್ಗೆ ಸಾರ್ವಜನಿಕರಿಂದ ಬರುತ್ತಿದ್ದ ದೂರಿನ ಅನ್ವಯ ಮಡಿಕೇರಿ ಡಿವೈಎಸ್‌ಪಿ ಜಗದೀಶ್.ಎಂ, ವೃತ್ತ ನಿರೀಕ್ಷಕ ಉಮೇಶ್.ಯು, ಮಡಿಕೇರಿ ಗ್ರಾಮಾಂತರ ಠಾಣೆ ಪಿಎಸ್ ಐ ವಾಣಿಶ್ರೀ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

ಈ ತಂಡ ಮಾಹಿತಿ ಸಂಗ್ರಹಿಸಿ ನಿಷೇಧಿತ ಮಾದಕ ವಸ್ತುಗಳ ಸರಬರಾಜು/ಮಾರಾಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರಿಜ್ವಾನ್.ಎಂ.ಎ.ನನ್ನು ಬೆಂಗಳೂರಿನ ದಾಸರಹಳ್ಳಿಯಲ್ಲಿ ಬಂಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!