ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕೆಲವು ದಿನಗಳ ಹಿಂದೆ ಟೊಮೆಟೋ ಬೆಲೆಯಲ್ಲಿ ಅಲ್ಪ ಪ್ರಮಾಣದ ನಿಯಂತ್ರಣ ಬಂದಿತ್ತು. ಇದೀಗ ಮತ್ತೆ ಹೆಚ್ಚಳವಾಗಿದೆ.
ತಮಿಳುನಾಡಿನಲ್ಲಿ ಟೊಮೆಟೋ ಬೆಲೆ ಜನರ ನಿದ್ದೆಗೆಡಿಸಿದ್ದು, ಭಾನುವಾರದಂದು ರಾಜ್ಯ ರಾಜಧಾನಿ ಹಾಗೂ ಹಲವು ಪಟ್ಟಣಗಳಲ್ಲಿ ಸಗಟು ಬೆಲೆ ಕಿಲೋಗ್ರಾಂಗೆ 200 ರೂ.ಆಗಿದೆ .
ಚೆನ್ನೈನ ಕೊಯಂಬೆಡು ಸಗಟು ಮಾರುಕಟ್ಟೆಯಲ್ಲಿ ಉತ್ಪನ್ನದ ಕೊರತೆಯು ಟೊಮೆಟೋ ಬೆಲೆ ಏರಿಕೆಗೆ ಕಾರಣವಾಗಿದೆ. ಮಧ್ಯಂತರ ಮಳೆಯಿಂದಾಗಿ ಬೆಳೆ ನಷ್ಟವಾದ ಕಾರಣ ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಟೊಮೆಟೋ ಆಗಮನದಲ್ಲಿ ಕೊರತೆಯಾಗಿದೆ.ಇದರಿಂದಾಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ ಎಂದು ಮಾರಾಟಗಾರರರು ಹೇಳುತ್ತಾರೆ.
ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 200 ರೂ.ಗೆ ಮಾರಾಟವಾಗುತ್ತಿದ್ದರೆ, ಕೆಲವು ಚಿಲ್ಲರೆ ಅಂಗಡಿಗಳಲ್ಲಿ ಟೊಮೆಟೋ ಕೆಜಿಗೆ 185 ರೂ.ಗೆ ಮಾರಾಟವಾಗುತ್ತಿವೆ.