ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಜನಾಂಗೀಯ ಗಲಭೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ವಿಷಯದಲ್ಲಿ ಪ್ರತಿಪಕ್ಷ ‘ಇಂಡಿಯಾ’ ಮೈತ್ರಿಕೂಟ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ವಾಗ್ದಾಳಿ ಮಾಡಿದ್ದಾರೆ.
ಈ ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಣಿಪುರ ಹೊತ್ತಿ ಉರಿದಿತ್ತು. ನೂರಾರು ಹತ್ಯೆಗಳು ನಡೆದಿದ್ದವು. ಆದರೆ ಅಂದಿನ ಪ್ರಧಾನಿ ಸದನದಲ್ಲಿ ತುಟಿಬಿಚ್ಚಲಿಲ್ಲ ಎಂದು ಕಿಡಿಕಾರಿದ್ದಾರೆ.
ನಾವು ಮಣಿಪುರ ಗಲಭೆಯ ಸೂಕ್ಷ್ಮತೆಯ ಬಗ್ಗೆ ಚರ್ಚೆ ಮಾಡಲು ಯಾವಾಗಲೂ ಸಿದ್ಧರಿದ್ದೇವೆ. ನಾಳೆ ಮಣಿಪುರಕ್ಕೆ ಹೋದ ಎಲ್ಲಾ ಸಂಸದರು ಚರ್ಚೆಗೆ ಸದನಕ್ಕೆ ಬರುತ್ತಾರೆ ಎಂದು ಆಶಿಸುತ್ತೇವೆ. ಈ ವೇಳೆ ಓಡಿಹೋಗದೇ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಎಂದು ಸಚಿವ ಅನುರಾಗ್ ಠಾಕೂರ್ ಸವಾಲು ಹಾಕಿದ್ದಾರೆ.
ಕೇವಲ ನಿಮ್ಮ ಮೈತ್ರಿಕೂಟದ ಸದಸ್ಯರುಮಣಿಪುರಕ್ಕೆ ಭೇಟಿ ನೀಡಿದರೆ ಸಾಲದು. ಮಹಿಳೆಯರು ದೌರ್ಜನ್ಯ ಎದುರಿಸುತ್ತಿರುವ ಪಶ್ಚಿಮ ಬಂಗಾಳಕ್ಕೂ ಭೇಟಿ ನೀಡಬೇಕಿತ್ತು ಎಂದಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ 21 ಸದಸ್ಯರು ನಿನ್ನೆ ಮತ್ತು ಇಂದು ಹಿಂಸಾಚಾರ ಪೀಡಿತ ಮಣಿಪುರದಲ್ಲಿನ ವಸ್ತುಸ್ಥಿತಿ ಅಧ್ಯಯನ ಮಾಡಿದ್ದಾರೆ.