ಬೆಳಿಗ್ಗೆ ಬೇಗ ತಯಾರಾಗಬೇಕು, ಮಧ್ಯಾಹ್ನದ ವರೆಗೆ ಹೊಟ್ಟೆನೂ ಗಟ್ಟಿಯಾಗಿರಬೇಕು ಅನ್ನೋರಿಗೆ Spring Onion Rice ಒಳ್ಳೆಯ ಬ್ರೇಕ್‌ಫಾಸ್ಟ್. ಎಣ್ಣೆ ಜಾಸ್ತಿ ಇಲ್ಲದೆ, ತಾಜಾ ಸ್ಪ್ರಿಂಗ್ ಓನಿಯನ್ ಸುವಾಸನೆಯೊಂದಿಗೆ ಸಿದ್ಧವಾಗುವ ಈ ರೈಸ್ ದಿನದ ಆರಂಭಕ್ಕೆ ಲೈಟ್ ಆದರೆ ಎನರ್ಜಿ ನೀಡುವ ತಿಂಡಿ.
ಬೇಕಾಗುವ ಪದಾರ್ಥಗಳು
ಬೇಯಿಸಿದ ಅನ್ನ – 2 ಕಪ್
ಸ್ಪ್ರಿಂಗ್ ಆನಿಯನ್ ಅಥವಾ ಈರುಳ್ಳಿ ಹೂವು (ಹಸಿರು ಮತ್ತು ಬಿಳಿ ಭಾಗ) – 1 ಕಪ್ (ಸಣ್ಣದಾಗಿ ಕತ್ತರಿಸಿದ್ದು)
ಎಣ್ಣೆ – 2 ಟೇಬಲ್ ಸ್ಪೂನ್
ಬೆಳ್ಳುಳ್ಳಿ – 1 ಟೀ ಸ್ಪೂನ್
ಹಸಿಮೆಣಸು – 1–2
ಸೋಯಾ ಸಾಸ್ – 1 ಟೀ ಸ್ಪೂನ್
ಮೆಣಸಿನ ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ವಿನೆಗರ್ (ಐಚ್ಛಿಕ) – ½ ಟೀ ಸ್ಪೂನ್
ತಯಾರಿಸುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ, ಬಿಸಿ ಆದ ನಂತರ ಬೆಳ್ಳುಳ್ಳಿ ಮತ್ತು ಹಸಿಮೆಣಸು ಹಾಕಿ ಸಣ್ಣಗೆ ಹುರಿಯಿರಿ. ಈಗ ಸ್ಪ್ರಿಂಗ್ ಆನಿಯನ್ ಬಿಳಿ ಭಾಗ ಸೇರಿಸಿ ಮಧ್ಯಮ ಉರಿಯಲ್ಲಿ ಸ್ವಲ್ಪ ಬೇಯಿಸಿ. ನಂತರ ಹಸಿರು ಭಾಗ ಸೇರಿಸಿ ಒಂದು ನಿಮಿಷ ಮಾತ್ರ ಫ್ರೈ ಮಾಡಿ. ಇದಕ್ಕೆ ಸೋಯಾ ಸಾಸ್, ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಬೇಯಿಸಿದ ಅನ್ನ ಸೇರಿಸಿ ನಿಧಾನವಾಗಿ ಕಲಸಿ, ಅನ್ನ ಮುರಿಯದಂತೆ ಗಮನಿಸಿ. ಕೊನೆಗೆ ವಿನೆಗರ್ ಸೇರಿಸಿ ಒಂದು ಸಾರಿ ಟಾಸ್ ಮಾಡಿ ಗ್ಯಾಸ್ ಆಫ್ ಮಾಡಿ.

