ಹೊಸದಿಗಂತ ವರದಿ,ಅಂಕೋಲಾ:
ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಮುದ್ರದ ಅಲೆಯ ಹೊಡೆತಕ್ಕೆ ದೋಣಿ ಮಗುಚಿ ಬಿದ್ದ ಪರಿಣಾಮ ದೋಣಿಯಲ್ಲಿದ್ದ ಮೀನುಗಾರ ನೀರಿಗೆ ಬಿದ್ದು ಮೃತ ಪಟ್ಟ ಘಟನೆ ತಾಲೂಕಿನ ಭಾವಿಕೇರಿ ಹರಿಕಂತ್ರವಾಡ ಸಮುದ್ರ ಪ್ರದೇಶದ ವ್ಯಾಪ್ತಿಯಲ್ಲಿ ನಡೆದಿದೆ.
ಭಾವಿಕೇರಿ ಹರಿಕಂತ್ರವಾಡದ ನಿವಾಸಿ ವಿಠ್ಠಲ ಗೋವಿಂದ ಹರಿಕಂತ್ರ (49) ಮೃತ ದುರ್ದೈವಿಯಾಗಿದ್ದು ಈತ ಸೋಮವಾರ ಬೆಳಿಗ್ಗಿನ ಜಾವ ಚಂದ್ರಕಾಂತ ಮನೋಹರ ಹರಿಕಂತ್ರ ಎನ್ನುವವರ ಜೊತೆಗೆ ಸೇರಿ ಶ್ರೀಆರ್ಯಾದುರ್ಗಾ ಎಂಬ ಪಾತಿ ದೋಣಿಯಲ್ಲಿ ತಮ್ಮ ಮನೆಯ ಸಮೀಪದ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ತೆರಳಿ ಬೀಸಿದ ಬಲೆಯನ್ನು ಎಳೆಯುತ್ತಿರುವ ಸಂದರ್ಭದಲ್ಲಿ ಬೃಹತ್ ಅಲೆ ಬಂದು ಅಪ್ಪಳಿಸಿ ದೋಣಿ ಮುಗುಚಿ ಬಿದ್ದಿದ್ದು ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡವನಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬೆಳಿಗ್ಗೆ 8.45 ರ,ಸುಮಾರಿಗೆ ಆತ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು
ಪಿ.ಎಸ್. ಐ,ಸುನೀಲ ಪ್ರಕರಣ ದಾಖಲಿಸಿದ್ದಾರೆ.