ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗಸ್ಟ್ ಮೊದಲ ದಿನವೇ ತೈಲ ಕಂಪನಿಗಳು ಸಿಲಿಂಡರ್ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿವೆ. ಜುಲೈನಲ್ಲಿ ಬೆಲೆ ಕೊಂಚ ಹೆಚ್ಚಿದ್ದರೂ ಆ ಬಳಿಕ ಸಿಲಿಂಡರ್ ಬೆಲೆ ಇಳಿಕೆ ಕಾಣುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಆಗಸ್ಟ್ 1 ರ ಬೆಳಿಗ್ಗೆ 100 ರೂ. ಕಡಿಮೆ ಮಾಡಿದೆ. 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ಈಗ ರೂ.1680 ಆಗಿದೆ. ಮೊದಲು 1780 ರೂ. ಇತ್ತು. ಆದರೆ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಆಗಸ್ಟ್ 1 ರಿಂದ ಹೊಸ ದರ
ವಾಣಿಜ್ಯ ಅನಿಲ ಸಿಲಿಂಡರ್‌ಗಳ ಹೊಸ ದರ ಆಗಸ್ಟ್ 1 ರಿಂದ ಜಾರಿಗೆ ಬಂದಿದೆ. ಪ್ರಮುಖ ನಗರಗಳಲ್ಲಿ ಇಂದಿನ ದರ ಹೀಗಿದೆ.
ಬೆಂಗಳೂರು- ₹ 1685.5ರೂ
ದೆಹಲಿ – 1680 ರೂ
ಕೋಲ್ಕತ್ತಾ -1802.50ರೂ
ಮುಂಬೈ – 1640.50 ರೂ
ಚೆನ್ನೈ – 1852.50 ರೂ