ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿಚಿಡಿ ವಿಚಾರಕ್ಕೆ ಶಾಲಾ ಶಿಕ್ಷಕಿ ಹಾಗೂ ಅಡುಗೆಯವರ ನಡುವೆ ಹೊಡದಾಟ ನಡೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೀದರ ಮಂಡಲದ ಧಾರೂರು ತಾಲೂಕಿನ ಜೋಡು ಹಿಂಗಣಿ ಜಿಲ್ಲಾ ಪರಿಷತ್ ಶಾಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಕ್ಕಳಿಗೆ ಮಾಡಿದ ಕಿಚಿಡಿ ವಿಚಾರಕ್ಕೆ ಶುರುವಾದ ಗಲಾಟೆ ಜುಟ್ಟು ಹಿಡಿದು ಹೊಡೆದಾಡುವ ಮಟ್ಟಕ್ಕೆ ಬೆಳೆದು ನಿಂತಿತು. ಮಾಡಿರುವ ಕಿಚಡಿ ರುಚಿಯಾಗಿಲ್ಲವೆಂದು ಶಿಕ್ಷಕಿ ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ಅಡುಗೆಯವರು ನನ್ನನ್ನು ಕೇಳಲು ನೀವು ಯಾರು? ಎಂದು ಒಬ್ಬರನ್ನೊಬ್ಬರು ಥಳಿಸಿಕೊಂಡಿದ್ದಾರೆ.
ಜೋಡು ಹಿಂಗಣಿ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ 1ರಿಂದ 4ನೇ ತರಗತಿವರೆಗಿನ 60 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ನಡುವೆ ಮಕ್ಕಳಿಗೆ ಕೊಡುವ ಕಿಚಿಡಿ ಬಗ್ಗೆ ನಿತ್ಯ ದೂರುಗಳು ಬರುತ್ತಿವೆ. ಕಿಚಿಡಿ ಗುಣಮಟ್ಟದಿಂದ ಕೂಡಿಲ್ಲ ಎಂದು ಮಕ್ಕಳು ಶಿಕ್ಷಕರ ಗಮನಕ್ಕೆ ತಂದರು. ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡುವಂತೆ ಶಿಕ್ಷಕರು ಅಡುಗೆಯವರಿಗೆ ತಿಳಿಸಿದ್ದಕ್ಕೆ ಇಷ್ಟೆಲ್ಲಾ ರಾದ್ಧಾಂತವಾಗಿದೆ.