ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲಿಷ್‌ನ ಫೇಮಸ್ ಸೀರೀಸ್ ‘ಯುಫೋರಿಯಾ’ದಲ್ಲಿ ( Euphoria) ವಿಭಿನ್ನ ಪಾತ್ರದಿಂದ ಎಲ್ಲರ ಗಮನಸೆಳೆದಿದ್ದ ಅಂಗಸ್ ಕ್ಲೌಡ್ (Angus cloud) ಇಹಲೋಕ ತ್ಯಜಿಸಿದ್ದಾರೆ.
ಈ ನಟನಿಗೆ ಬರೀ 25 ವರ್ಷವಾಗಿತ್ತು, ಅಂಗಸ್ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಅಂಗಸ್ ಕೆಲ ವಾರಗಳ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಇದಾದ ನಂತರ ಅಂಗಸ್ ನಗುಮುಖದಲ್ಲಿದ್ದದ್ದನ್ನು ಯಾರೂ ನೋಡಿಲ್ಲ, ಖಿನ್ನತೆಗೆ ಜಾರಿದ್ದರು ಎನ್ನಲಾಗಿದೆ.
ಅಂಗಸ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯೂ ಇದೆ, ಎಮರ್ಜೆನ್ಸಿ ಸಂಖ್ಯೆಗೆ ತಾಯಿ ಕರೆ ಮಾಡಿ ಮಗ ಉಸಿರಾಡುತ್ತಿಲ್ಲ ಎಂದು ಹೇಳಿದ್ದರು. ಎಚ್‌ಬಿಒ ಟಿವಿ ಸೀರೀಸ್‌ನ ಪಾರ್ಟ್ 2 ಯುಫೋರಿಯಾ ಕಳೆದ ವರ್ಷವಷ್ಟೇ ಪ್ರಸಾರವಾಗಿತ್ತು. ಅತ್ಯದ್ಭುತ ನಟನೆಯಿಂದ ಜನರನ್ನು ಸೆಳೆದಿದ್ದ ಅಂಗಸ್ ಸಾವಿಗೆ ಸಿನಿ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.