ಟೊಮ್ಯಾಟೊ ಬೆಲೆಯಲ್ಲಿ ಹೊಸ ದಾಖಲೆ ಬರೆದ ಮದನಪಲ್ಲಿ ಮಾರುಕಟ್ಟೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ‘ಟೊಮ್ಯಾಟೊ’ ಬೆಲೆ ಗಗನಕ್ಕೇರುತ್ತಿದ್ದು, ಜನಸಮಾನ್ಯರಿಗೆ ಕೈಗೆಟುಕದಂತಾಗಿದೆ. ದೇಶದ ಹಲವು ಮಾರುಕಟ್ಟೆಗಳಲ್ಲಿ ಕೆಜಿ ಟೊಮ್ಯಾಟೋಗೆ 200ರೂಪಾಯಿವರೆಗೂ ಮುಟ್ಟಿದ್ದರೆ, ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಹೊಸ ದಾಖಲೆ ಬರೆದಿದೆ.

2-3 ದಿನಗಳ ಹಿಂದೆ 200ರೂ ಇದ್ದ ಟೊಮ್ಯಾಟೋ ಮಂಗಳವಾರದಿಂದ 224ರೂಪಾಯಿಗೆ ಏರಿಕೆಯಾಗಿದೆ. ಇಂದೂ ಅದೇ ಬೆಲೆ ಮುಂದುವರಿದಿದ್ದು, ಕೊಳ್ಳುವವರಿಗೆ ದಿಕ್ಕು ತೋಚದಂತಾಗಿದೆ.

ಮಾರುಕಟ್ಟೆಗೆ ಸುಮಾರು ಹತ್ತು ಸಾವಿರ ಕ್ರೇಟ್ ಸರಕು ಬಂದಿದ್ದು, ಒಂದು ಕ್ರೇಟ್ ಬೆಲೆ ರೂ. 5600 ಹರಾಜಿಗಿದೆ ಎಂದು ಟಿವಿಎಸ್ ಮಂಡಿ ಮಾಲೀಕ ಬಾಬು ಹಾಗೂ ಮ್ಯಾನೇಜರ್ ಶಮೀರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಲ್ಲಿಗೆ ಬರುವ ಟೊಮೆಟೊ ಉತ್ತರದ ರಾಜ್ಯಗಳಿಗೆ ರಫ್ತಾಗುತ್ತಿದೆ. ಇದು ಮಾರುಕಟ್ಟೆ ಇತಿಹಾಸದಲ್ಲಿಯೇ ಗರಿಷ್ಠ ಬೆಲೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!