ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದಲ್ಲಿ ಪತಿಯೊಬ್ಬ ತನ್ನ ಗರ್ಭಿಣಿ ಪತ್ನಿಗೆ ವರದಕ್ಷಿಣೆ ಕೊಟ್ಟಿಲ್ಲ ಎಂದು ರಸ್ತೆಯಲ್ಲಿಯೇ ಥಳಿಸಿ, ತಲಾಖ್ ನೀಡಿದ್ದಾನೆ.
ಹೆಚ್ಚು ಹಣ ಕೊಟ್ಟಿಲ್ಲ ಎಂದು ಪತ್ನಿಗೆ ರಸ್ತೆಯಲ್ಲೇ ಥಳಿಸಿ ಹಿಂಸೆ ನೀಡಿದ್ದು, ಆಕೆಗೆ ಗರ್ಭಪಾತವಾಗಿದೆ. ಪತಿ ಹಾಗೂ ಆತನ ಕುಟುಂಬದ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅತ್ತೆ ಮಾವನ ಬಳಿ ಹಣವಿದ್ದರೂ ಕೊಟ್ಟಿಲ್ಲ, ಕಡಿಮೆ ವರದಕ್ಷಿಣೆ ನೀಡಿ ಮದುವೆ ಮಾಡಿದ್ದರು ಎಂದು ಪ್ರತಿದಿನವೂ ಪತಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ಹೇಳಿದ್ದಾರೆ.
ರಸ್ತೆಯಲ್ಲೇ ಆತ ತಲಾಖ್ ನೀಡಿದ್ದು, ಮನೆಯವರು ಆತನಿಗೆ ಬೆಂಬಲ ನೀಡಿದ್ದಾರೆ. ಆತನಿಗೆ ಮತ್ತೊಂದು ಮದುವೆ ಮಾಡಲು ಮನೆಯವರು ಪ್ರಯತ್ನಿಸಿದ್ದಾರೆ. ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ಗರ್ಭಪಾತವಾಗಿದೆ ಎಂದು ಮಹಿಳೆ ಪೋಷಕರು ದೂರಿದ್ದಾರೆ.