ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಪ್ಲೇಟ್ ಇಡ್ಲಿಯ ಬೆಲೆ ಎಷ್ಟು ಇರಬಹುದು 30 ರೂ, 50 ರೂ, ಇನ್ನೂ ಹೆಚ್ಚೆಂದರೆ 100 ರೂಪಾಯಿ ಇರಬಹುದು. ಆದರೆ ಹೈದರಾಬಾದ್‌ನ ಬಂಜಾರಾ ಹಿಲ್ಸ್ ನ ಕೆಫೆಯಲ್ಲಿ ಇಡ್ಲಿಯ ಬೆಲೆ 200 ರೂ. ಅಂತಹ ವಿಶೇಷ ಏನಿರಬಹುದು ಅಂತೀರಾ? ಈ ಇಡ್ಲಿ ಚಿನ್ನದಿಂದ ತಯಾರಾಗಿದ್ದು, ಅದೂ ಕೂಡ 24 ಕ್ಯಾರೆಟ್ ಶುದ್ಧ ಚಿನ್ನವನ್ನು ಬಳಸಲಾಗಿದೆ.
ಹೈದರಾಬಾದ್ ಆಹಾರ ಪ್ರಿಯರಿಗೆ ಇದೀಗ ಗೋಲ್ಡನ್ ಇಡ್ಲಿ ತಿನ್ನುವ ಸುವರ್ಣಾವಕಾಶ ಸಿಕ್ಕಿದೆ. ಹೈದರಾಬಾದ್ ಐತಿಹಾಸಿಕ ಮಾತ್ರವಲ್ಲದೆ ವೈವಿಧ್ಯಮಯ ರುಚಿಗಳಿಗೂ ಹೆಸರುವಾಸಿಯಾಗಿದೆ. ಹೈದರಾಬಾದ್ ಹಲೀಂ, ಬಿರಿಯಾನಿ, ಪೂತರೇಕುಲು ಹೀಗೆ ನಹಲವು ಖಾದ್ಯಗಳ ಜೊತೆಗೆ ಈಗ ಗೋಲ್ಡನ್ ಇಡ್ಲಿಯೂ ಸೇರ್ಪಡೆಯಾಗಿದೆ.
ಈ ವಿಭಿನ್ನ ಇಡ್ಲಿಯನ್ನು ಸವಿಯಬೇಕಾದರೆ ಬಂಜಾರ ಹಿಲ್ಸ್‌ನಲ್ಲಿರುವ ಕೃಷ್ಣಾ ಇಡ್ಲಿ ಮತ್ತು ದೋಸೆ ಕೆಫೆಗೆ ಹೋಗಬೇಕು. ಇಲ್ಲಿ ಚಿನ್ನದ ಇಡ್ಲಿ ಮಾತ್ರವಲ್ಲ..ಚಿನ್ನದ ದೋಸೆ, ಹೀಗೆ ವಿಭಿನ್ನವಾದ ಆಹಾರ ಪದಾರ್ಥಗಳು ಲಭ್ಯವಿವೆ.