ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಫ್ಲವರ್ ಶೋ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ರತೀ ವರ್ಷ ನಡೆಯುವ ಫ್ಲವರ್ ಶೋ ಈ ಬಾರಿಯೂ ನಡೆಯಲಿದ್ದು, ನಾಳೆಯಿಂದ ಫ್ಲವರ್ ಶೋಗೆ ಚಾಲನೆ ಸಿಗಲಿದೆ.

ಕೊರೋನಾ ಕಾರಣದಿಂದ ಎರಡು ವರ್ಷ ರದ್ದಾಗಿದ್ದ ಫ್ಲವರ್ ಶೋ ಇದೀಗ ಈ ಬಾರಿ ಮತ್ತೆ ನಡೆಯುತ್ತಿದ್ದು, ಒಟ್ಟಾರೆ 10 ಲಕ್ಷ ಮಂದಿ ಬರುವ ನಿರೀಕ್ಷೆ ಇದೆ. ಸಿಎಂ ಸಿದ್ದರಾಮಯ್ಯ ನಾಳೆ ಸಂಜೆ ಆರು ಗಂಟೆಗೆ ಶೋ ಉದ್ಘಾಟನೆ ಮಾಡಲಿದ್ದಾರೆ, ನಾಳೆಯಿಂದ ಆ.15ರವರೆಗೂ ಶೋ ನಡೆಯಲಿದೆ.

ಥೀಮ್ ಏನು?
ಈ ಬಾರಿ ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಫ್ಲವರ್ ಶೋ ಮೂಡಿ ಬರಲಿದೆ.

ಎರಡು ಕೋಟಿ ರೂಪಾಯಿ
ಈ ಬಾರಿಯ ಫ್ಲವರ್ ಶೋನಲ್ಲಿ ಒಟ್ಟಾರೆ 69ಬಗೆಯ ಹೂವುಗಳನ್ನು ನೋಡಬಹುದಾಗಿದೆ. ಇದಕ್ಕಾಗಿ ಎರಡು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

ಏನೆಲ್ಲಾ ಸಿದ್ಧತೆಗಳು?

  • ಶಾಲಾ ಮಕ್ಕಳಿಗಾಗಿ ಫ್ಲವರ್ ಶೋ ಫ್ರೀ
  • ಸಾರ್ವಜನಿಕರಿಗೆ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ
  • ನಾಲ್ಕೂ ಗೇಟ್‌ಗಳಲ್ಲಿ ಜನರಿಗೆ ಎಂಟ್ರಿ
  • 200ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ
  • ಸಾಕು ನಾಯಿಗಳಿಗೆ ವ್ಯಾಕ್ಸಿನ್
  • 30 ಪೊಲೀಸ್ ಸಿಬ್ಬಂದಿ ನೇಮಕ
  • ಹೆಲ್ತ್ ಕೇರ್ ಸೆಂಟರ್, ಆಂಬುಲೆನ್ಸ್
  • ಮಹಿಳೆಯರಿಗಾಗಿ ಎರಡು ಪ್ರತ್ಯೇಕ ಶಿಬಿರ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!