ರಾತ್ರಿ ನಿದ್ರೆ ಕೇವಲ ದೇಹಕ್ಕೆ ವಿಶ್ರಾಂತಿ ನೀಡುವುದಲ್ಲ, ಅದು ನಮ್ಮ ಜೀವನದ ಶಕ್ತಿಯನ್ನು ಪುನಃ ರೂಪಿಸುವ ಸಮಯವೂ ಹೌದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಾವು ಮಲಗುವ ಕೋಣೆಯಲ್ಲಿ ಬಳಸುವ ವಸ್ತುಗಳು, ವಿಶೇಷವಾಗಿ ತಲೆಯ ಬಳಿ ಇರುವ ವಸ್ತುಗಳು, ಮನಸ್ಸು, ಆರೋಗ್ಯ ಮತ್ತು ಅದೃಷ್ಟದ ಮೇಲೆ ನೇರ ಪ್ರಭಾವ ಬೀರುತ್ತವೆ ಎನ್ನಲಾಗಿದೆ. ಅದಕ್ಕಾಗಿ ದಿಂಬಿನ ಪಕ್ಕ ಅಥವಾ ಕೆಳಗಡೆ ಯಾವ ವಸ್ತುಗಳನ್ನು ಇಡಬೇಕು, ಯಾವುವನ್ನು ತಪ್ಪಿಸಬೇಕು ಎಂಬುದಕ್ಕೆ ವಾಸ್ತು ವಿಶೇಷ ಮಾರ್ಗದರ್ಶನ ನೀಡುತ್ತದೆ. ಅಜಾಗರೂಕತೆಯಿಂದ ಇಡಲಾದ ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಸಮಸ್ಯೆಗಳಿಗೆ ಕಾರಣವಾಗಬಹುದು.
- ಪರ್ಸ್ ಮತ್ತು ಹಣಕ್ಕೆ ಸಂಬಂಧಿಸಿದ ವಸ್ತುಗಳು: ದಿಂಬಿನ ಬಳಿ ಪರ್ಸ್, ಹಣ ಅಥವಾ ಕಾರ್ಡ್‌ಗಳನ್ನು ಇಟ್ಟು ಮಲಗುವುದು ವಾಸ್ತು ಪ್ರಕಾರ ಅಶುಭ. ಇದರಿಂದ ಹಣ ನಿಲ್ಲದೇ ಖರ್ಚಾಗುವುದು ಮತ್ತು ಆರ್ಥಿಕ ನಷ್ಟ ಉಂಟಾಗಬಹುದು.
- ಔಷಧಿಗಳು: ಮಂಚದ ಪಕ್ಕ ಅಥವಾ ದಿಂಬಿನ ಬಳಿ ಔಷಧಿಗಳನ್ನು ಇಡುವುದು ಅನಾರೋಗ್ಯದ ಸೂಚಕ ಎಂದು ವಾಸ್ತು ಹೇಳುತ್ತದೆ. ಇದು ಮನೆಯವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
- ಪುಸ್ತಕಗಳು ಮತ್ತು ಕಾಗದಗಳು: ದಿಂಬಿನ ಪಕ್ಕದಲ್ಲಿ ಪುಸ್ತಕಗಳನ್ನು ಇಟ್ಟು ಮಲಗುವುದರಿಂದ ಮನಸ್ಸಿಗೆ ವಿಶ್ರಾಂತಿ ಸಿಗದೆ ನಕಾರಾತ್ಮಕತೆ ಹೆಚ್ಚುತ್ತದೆ. ವೃತ್ತಿ ಮತ್ತು ಅಧ್ಯಯನದಲ್ಲೂ ಅಡ್ಡಿಗಳು ಉಂಟಾಗಬಹುದು.
- ಚಪ್ಪಲಿ ಅಥವಾ ಪಾದರಕ್ಷೆ: ಹಾಸಿಗೆಯ ಬಳಿ ಚಪ್ಪಲಿ ಇಡುವುದು ಮನೆಗೆ ಅಶಾಂತಿ ಮತ್ತು ಆರ್ಥಿಕ ಸಮಸ್ಯೆಗಳನ್ನು ಆಹ್ವಾನಿಸುವುದಾಗಿ ನಂಬಲಾಗಿದೆ.
- ಚಿನ್ನ ಮತ್ತು ಬೆಳ್ಳಿ ಆಭರಣಗಳು: ಮಲಗುವಾಗ ಆಭರಣಗಳನ್ನು ಹಾಸಿಗೆಯ ಬಳಿ ಇಡುವುದು ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಎಚ್ಚರಿಸುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

