ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ಅಭಿನಯದ ಬ್ಲಾಕ್ ಬಸ್ಟರ್ ಚಲನಚಿತ್ರ ‘ಕೋಯಿ ಮಿಲ್ ಗಯಾ’ ಮತ್ತೆ ತೆರೆಗೆ ಬರಲು ಸಜ್ಜಾಗಿದೆ.
20 ವರ್ಷಗಳ ಬಳಿಕ ತೆರೆಕಾಣುತ್ತಿರುವ ಈ ಸಿನಿಮಾವನ್ನು ಸಿನಿಪ್ರಿಯರು ಚಿತ್ರಮಂದಿರಗಳಿಗೆ ಹೋಗಿ ಕಣ್ತುಂಬಿಕೊಳ್ಳಬಹುದು.
ಈ ಚಿತ್ರವನ್ನು ಹೃತಿಕ್ ರೋಷನ್ ಅವರ ತಂದೆ ಸ್ಟಾರ್ ಡೈರೆಕ್ಟರ್ ರಾಕೇಶ್ ರೋಷನ್ ಅವರೇ ಬರೆದು, ನಿರ್ದೇಶಿಸಿದ್ದಾರೆ. 2003ರ ಆಗಸ್ಟ್ 8ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ ವಿಚಾರದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು.
ಕೋಯಿ ಮಿಲ್ ಗಯಾ ಚಲನಚಿತ್ರ 2023ರ ಆಗಸ್ಟ್ 8ರಂದು 20 ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ 30 ನಗರಗಳಲ್ಲಿ ಮತ್ತೊಮ್ಮೆ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಆಗಸ್ಟ್ 4ರಂದು ಅಂದರೆ ಇದೇ ಶುಕ್ರವಾರ ಸಿನಿಮಾ ಮರು ಬಿಡುಗಡೆ ಆಗಲಿದೆ ಎಂಬ ತಿಳಿದುಬಂದಿದೆ.