ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪತ್ನಿ ಸಾನಿಯಾ ಮಿರ್ಜಾ (Sania Mirza) ಹೆಸರನ್ನು ತೆಗೆದುಹಾಕಿದ್ದಾರೆ. ಇದೀಗ ಇದು ಚರ್ಚೆಗೆ ಎಡಮಾಡಿಕೊಟ್ಟಿದೆ.
ಶೋಯೆಬ್ ಮಲಿಕ್ ಅವರು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರೊಂದಿಗಿನ ಡಿವೋರ್ಸ್ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.
ಈ ಹಿಂದೆ, ಶೋಯೆಬ್ ಮಲಿಕ್ ಅವರ ಇನ್‌ಸ್ಟಾಗ್ರಾಮ್ ಬಯೋನಲ್ಲಿ husband to a superwoman @mirzasaniar’ ಎಂದು ಬರೆದುಕೊಂಡಿದ್ದರು, ಅದನ್ನು ಈಗ Father to One True Blessing ಎಂದು ಬದಲಾಯಿಸಿದ್ದಾರೆ.T20 ಆಲ್‌ರೌಂಡರ್ ಶೋಯೆಬ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಯೋವನ್ನು ಬದಲಾಯಿಸಿದ್ದರಿಂದ ಸೆಲೆಬ್ರಿಟಿ ದಂಪತಿ ಡಿವೋರ್ಸ್‌ನತ್ತ ಸಾಗುತ್ತಿದ್ದಾರೆ ಎಂಬ ವದಂತಿಗಳು ಮತ್ತೊಮ್ಮೆ ಎದ್ದಿವೆ.
ಕಳೆದ ವರ್ಷ ನವೆಂಬರ್‌ನಿಂದ ಸಾನಿಯಾ ಅವರ ನಿಗೂಢ ಸಂದೇಶಗಳು ವದಂತಿಗಳನ್ನು ಹೆಚ್ಚಿಸಿವೆ, ಆದರೂ ಈ ವರದಿಗಳ ಬಗ್ಗೆ ಶೋಯೆಬ್ ಅಥವಾ ಸಾನಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಏಪ್ರಿಲ್ 12, 2010 ರಂದು, ಭಾರತದ ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ಮುಸ್ಲಿಂ ಸಮಾರಂಭದಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಮದುವೆಯಾದರು.