FRIENDSHIP DAY SPECIAL| ಕಚೇರಿಯಲ್ಲಿನ ಸಹೋದ್ಯೋಗಿಗಳೊಂದಿಗಿನ ಸ್ನೇಹ ತುಂಬಾ ವಿಶೇಷ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ಕಚೇರಿಯಲ್ಲಿ ಕೆಲಸ ಮಾಡುವವರು, ಜೀವನದ ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆಯಲಾಗುತ್ತದೆ. ಹಾಗಾಗಿಯೇ ಕಚೇರಿಯಲ್ಲಿರುವ ಸಹೋದ್ಯೋಗಿಗಳೊಂದಿಗಿನ ಸ್ನೇಹವೂ ಕೂಡ ಅಷ್ಟೇ ಪ್ರಮುಖವಾಗಿರುತ್ತದೆ.

ಕೆಲವೊಮ್ಮೆ ಹಿರಿಯ ಮತ್ತು ಕಿರಿಯರ ನಡುವೆ ಉತ್ತಮ ಸ್ನೇಹವು ರೂಪುಗೊಳ್ಳುತ್ತದೆ. ಇಲ್ಲಿ ಒಂದು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ ಅಂದರೆ, ಸ್ನೇಹ ಮತ್ತು ವೃತ್ತಿಯನ್ನು ಒಟ್ಟಿಗೆ ನೋಡಬಾರದು. ಸಹೋದ್ಯೋಗಿಗಳ ನಡುವಿನ ಸ್ನೇಹವು ಕೆಲಸದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಗೊತ್ತಿಲ್ಲದ ವಿಷಯಗಳನ್ನು ಕಲಿಯುವುದು, ಹೊಸ ವಿಚಾರಗಳನ್ನು ಹಂಚಿಕೊಳ್ಳುವುದು, ಇವು ಆರೋಗ್ಯಕರ ವಾತಾವರಣವನ್ನು ಸೂಚಿಸುತ್ತವೆ.

ವಿಭಿನ್ನ ಮನಸ್ಥಿತಿಯ ಜನರು ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ಎಲ್ಲರ ಮನಸ್ಥಿತಿಯೂ ಒಂದೇ ರೀತಿ ಇರುವುದಿಲ್ಲ. ಕೆಲವರು ಗಂಭೀರವಾಗಿ ತಮ್ಮ ಕೆಲಸ ಮಾಡಿ ಬಿಡುತ್ತಾರೆ. ಕೆಲವರು ಮಾತನಾಡುತ್ತಲೇ ಇರುತ್ತಾರೆ. ಸೀರಿಯಸ್ ಆಗೋದು ಒಳ್ಳೇದಲ್ಲ.. ಅನಾವಶ್ಯಕವಾಗಿ ಜಾಸ್ತಿ ಮಾತಾಡೋದು ಒಳ್ಳೆಯದಲ್ಲ. ಸಮತೋಲಿತವಾಗಿರುವುದು ಉತ್ತಮ.

ಸಹೋದ್ಯೋಗಿಗಳು ಕಛೇರಿಗೆ ಬರುವಾಗ.. ಅವರ ಹುಟ್ಟುಹಬ್ಬ, ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ ವಿಶ್ ಮಾಡುವುದು ತುಂಬಾ ಒಳ್ಳೆಯ ಅಭ್ಯಾಸ. ಸಹೋದ್ಯೋಗಿಗಳೊಂದಿಗೆ ಅವರ ವೈಯಕ್ತಿಕ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಅಗತ್ಯಕ್ಕೆ ತಕ್ಕಂತೆ ಮಾತನಾಡುವುದು ಮತ್ತು ಅವರಿಗೆ ಏನಾದರೂ ಅಗತ್ಯವಿದ್ದರೆ ಸಹಾಯ ಮಾಡುವುದು ಕೆಲಸದ ಸ್ಥಳದಲ್ಲಿ ಸ್ನೇಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಬಾಸ್ ಆದವರು ತನ್ನ ಸಹೋದ್ಯೋಗಿಗಳನ್ನು ಪದೇ ಪದೇ ಟೀಕಿಸುವುದರಿಂದ ಕಚೇರಿಯ ವಾತಾವರಣ ಕಲುಷಿತವಾಗುತ್ತದೆ. ಇದು ಅಂತಿಮವಾಗಿ ಕಂಪನಿಯ ಅಭಿಮಾನವನ್ನು ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ ನೀವು ನಿಮ್ಮ ಸಹೋದ್ಯೋಗಿಗಳೊಂದಿಗೆ ಸ್ನೇಹದಿಂದ ಉಳಿದುಕೊಂಡು ಕಂಪನಿಯ ಜವಾಬ್ದಾರಿಗಳನ್ನು ನಿರ್ಲಕ್ಷಿಸದೆ ಕೆಲಸ ಮಾಡಬೇಕು.

ಅನಾವಶ್ಯಕ ಜಗಳಗಳಿಂದ ಮನಸ್ಸನ್ನು ಹಾಳು ಮಾಡಿಕೊಂಡರೆ ಕೆಲಸದ ಕಡೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆರೋಗ್ಯಕರ ವಾತಾವರಣದಲ್ಲಿ ಕೆಲಸ ಮಾಡುವುದು ಎಂದರೆ ಎಲ್ಲರಿಗೂ ಆರಾಮವಾಗಿ ಶುಭಾಶಯ ಹೇಳುತ್ತಾ ಮುನ್ನಡೆಯುವುದು. ಆಗಸ್ಟ್ 6 ‘ಅಂತರರಾಷ್ಟ್ರೀಯ ಸ್ನೇಹಿತರ ದಿನ’. ಕೆಲಸದ ಸ್ಥಳದಲ್ಲಿ ನಿಮ್ಮ ಸ್ನೇಹಿತರನ್ನು ಹಾರೈಸಿ. ಸ್ನೇಹಿತರ ದಿನದ ಶುಭಾಶಯಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!