ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ಸಿದ್ದಳಿದ್ದೇನೆ ಎಂದು ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಹೇಳಿಕೊಂಡಿದ್ದಾರೆ.
ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಶಾರ್ಲಿನ್ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆ ಹರಿಯಾಣದ ಕೆಲವು ಮಹಿಳೆಯರು ಸೋನಿಯಾ ಅವರ ನಿವಾಸಕ್ಕೆ ಬಂದಿದ್ದರು. ಆ ಸಮಯದಲ್ಲಿಯೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿವಾಹದ ಬಗ್ಗೆ ಪ್ರಸ್ತಾಪವಿತ್ತು. ಇದೀಗ ರಾಹುಲ್ ಜೊತೆಗಿನ ಮದುವೆಯ ಬಗ್ಗೆ ನಟಿ ಶೆರ್ಲಿನ್ ಚೋಪ್ರಾ ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ರಾಹುಲ್ ಅವರನ್ನು ಮದುವೆಯಾಗುತ್ತೀರಾ ಎಂದು ಶೆರ್ಲಿನ್ ಚೋಪ್ರಾ ಅವರನ್ನು ಕೇಳಿದಾಗ, ಅವರು ತಕ್ಷಣ ಯಾವುದೇ ಹಿಂಜರಿಕೆಯಿಲ್ಲದೆ ಹೌದು ಎಂದು ಹೇಳಿದರು. ರಾಹುಲ್ ಗಾಂಧಿಯನ್ನು ಏಕೆ ಮದುವೆಯಾಗಬಾರದು? ಅವರನ್ನು ಮದುವೆಯಾಗಲು ನಾನು ಒಪ್ಪಿಕೊಂಡಿದ್ದೇನೆ. ಆದರೆ ಒಂದು ಷರತ್ತು. ನಾನು ಮದುವೆಯ ನಂತರವೂ, ಉಪನಾಮವನ್ನು ಚೋಪ್ರಾ ಎಂದು ಹೊಂದಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದೆ. ವೀಡಿಯೊಗೆ ಸಂಬಂಧಿಸಿದ ಹಲವಾರು ಪೋಸ್ಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಶೆರ್ಲಿನ್ ಅವರ ಹೇಳಿಕೆಗೆ ಕಾಂಗ್ರೆಸ್ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ.