ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕ್ವಿಟ್ INDIA’ ಗೆ ಪ್ರಧಾನಿ ಮೋದಿ ಇಂದು ಕರೆ ನೀಡಿದ್ದಾರೆ.
ರೈಲ್ವೆ ಇಲಾಖೆಯ ಬೃಹತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳ ಒಕ್ಕೂಟ INDIA ಮೈತ್ರಿ ಕೂಟದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು. ಈ ವೇಳೆ ಭಾರತ ದೇಶವು ಕ್ವಿಟ್ ಇಂಡಿಯಾ ಚಳುವಳಿಯಿಂದ ಪ್ರೇರೇಪಿತರಾಗಬೇಕಿದೆ. ಇಡೀ ದೇಶವು ಭ್ರಷ್ಟಾಚಾರ, ವಂಶ ಪಾರಂಪರ್ಯ ರಾಜಕಾರಣ ಹಾಗೂ ಓಲೈಕೆ ರಾಜಕಾರಣದ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನಾವು ಋಣಾತ್ಮಕ ರಾಜಕಾರಣವನ್ನು ಮೆಟ್ಟಿ ನಿಲ್ಲಬೇಕಿದೆ . ಧನಾತ್ಮಕ ರಾಜಕಾರಣದತ್ತ ನಮ್ಮ ಪಥ ಬದಲಾವಣೆ ಮಾಡೋದೇ ಪ್ರಾಧಾನ್ಯತೆ ಎಂದು ಹೇಳಿದರು. ನಾವು ಅಬಿವೃದ್ದಿಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ವಿರೋಧ ಪಕ್ಷಗಳು ತಾವೂ ಕೆಲಸ ಮಾಡಬಾರದು, ಬೇರೆಯವರಿಗೂ ಕೆಲಸ ಮಾಡಲು ಬಿಡಬಾರದು ಎಂಬ ಧೋರಣೆ ಅನುಸರಿಸುತ್ತಿವೆ. ಇವತ್ತು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದು ಹೇಳಿದರು.
ನಾವು ಅಭಿವೃದ್ದಿ ಹೊಂದುತ್ತಿರುವ ದೇಶದ ಪಟ್ಟಿಯಿಂದ ಅಭಿವೃದ್ದಿ ಹೊಂದಿದ ದೇಶವಾಗಬೇಕು. ಇದಕ್ಕಾಗಿ ಅಮೃತ ಕಾಲ ಯೋಜನೆ ರೂಪಿಸಲಾಗಿದೆ. ದೇಶದ ಜನರಲ್ಲಿ ಹೊಸ ಶಕ್ತಿ, ಹೊಸ ಪ್ರೇರಣೆ, ಹೊಸ ಸಂಕಲ್ಪ ಹಾಗೂ ಹೊಸ ಚೈತನ್ಯ ಮನೆ ಮಾಡಿದೆ. ಅದರಲ್ಲೂ ಭಾರತೀಯ ರೈಲ್ವೆ ಹೊಸ ಅಧ್ಯಾಯದ ಆರಂಭಕ್ಕೆ ಮುನ್ನುಡಿ ಬರೆದಿದೆ ಎಂದು ಪ್ರಧಾನಿ ಮೋದಿ ಹೇಳಿದರು.