ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಕ್ರಿಕೆಟಿಗ ಸರ್ಫರಾಜ್ ಖಾನ್, ಜಮ್ಮು ಮತ್ತು ಕಾಶ್ಮೀರದ ಯುವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಪ್ಪು ಶೆರ್ವಾನಿಯಲ್ಲಿ ಸರ್ಫರಾಜ್ ಖಾನ್ ಮತ್ತು ಕೆಂಪು ಚೂಡಿದಾರ್ನಲ್ಲಿ ಕಾಶ್ಮೀರಿ ವಧು ಮಿಂಚಿದರು. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಖಾನ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಶೋಪಿಯಾನ್ ಜಿಲ್ಲೆಯ ಯುವತಿಯನ್ನು ವರಿಸಿದ್ದು, ಕಾಶ್ಮೀರಿ ಹುಡುಗಿಯನ್ನು ಮದುವೆಯಾಗುವುದು ನನ್ನ ಅದೃಷ್ಟ ಎಂದು ಖಾನ್ ಹೇಳಿದ್ದಾರೆ. ದೇಶೀಯ ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಿದ ಖಾನ್ ಅವರನ್ನು ನೋಡಲು ಕಾಶ್ಮೀರಿ ಕ್ರಿಕೆಟ್ ಅಭಿಮಾನಿಗಳು ಮುಗಿಬಿದ್ದರು.
ತಮ್ಮ ಆಸೆಗಳನ್ನು ವ್ಯಕ್ತಪಡಿಸುತ್ತಾ, ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಇಚ್ಛೆಯನ್ನು ತಿಳಿಸಿದರು.
25ರ ಹರೆಯದ ಖಾನ್ 13 ಶತಕಗಳು ಸೇರಿದಂತೆ 3559 ರನ್ಗಳನ್ನು ಗಳಿಸಿದ್ದಾರೆ. ಅವರು ಇದುವರೆಗೂ 31 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.