ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮವಾರ ನಿಧನರಾದ ಕ್ರಾಂತಿಕಾರಿ ಸಾಹಿತಿ ಗದ್ದರ್ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲು ಆದೇಶಿಸಿರುವ ತೆಲಂಗಾಣ ಸರ್ಕಾರದ ನಿಲುವನ್ನು ಭಯೋತ್ಪಾದನಾ ವಿರೋಧಿ ವೇದಿಕೆ ಖಂಡಿಸಿದೆ.
ಸರ್ಕಾರಿ ಲಾಂಛನದಡಿ ಗದ್ದರ್ ಅಂತ್ಯಕ್ರಿಯೆ ನಡೆಸದಂತೆ ವೇದಿಕೆ ಸರ್ಕಾರಕ್ಕೆ ಮನವಿ ಮಾಡಿದೆ.
ಸರ್ಕಾರದ ಈ ಆದೇಶದಿಂದ ಹುತಾತ್ಮ ಪೊಲೀಸರಿಗೆ ಅವಮಾನವಾಗುತ್ತದೆ ಎಂದಿರುವ ವೇದಿಕೆಯ ಸಂಚಾಲಕ ಶಶೊಧರ್, ಗದ್ದರ್ ತಮ್ಮ ಕ್ರಾಂತಿಕಾರಿ ಗೀತೆಗಳಿಂದ ಸಾವಿರಾರು ಯುವಕರನ್ನು ನಕ್ಸಲ್ ಮನಸ್ಥಿತಿ ಕಡೆಗೆ ಪರಿವರ್ತಿಸಿದ್ದರು. ಇದು ಸಾವಿರಾರು ಪೊಲೀಸರ ಜೀವ ಬಲಿಪಡೆದಿದೆ. ಸರಕಾರದ ನಿರ್ಧಾರವು ಪೊಲೀಸ್ ಪಡೆಯ ನೈತಿಕತೆಯನ್ನು ಪ್ರಶ್ನೆ ಮಾಡುವಂತಿದೆ ಎಂದು ಹೇಳಿದ್ದಾರೆ.
ಸರ್ಕಾರವು ನಕ್ಸಲೀಯರ ವಿರುದ್ಧದ ಹೋರಾಟದಲ್ಲಿ ಮಡಿದ ಪೊಲೀಸರ ತ್ಯಾಗವನ್ನು ಅವಮಾನಿಸಲು ಈ ನಿರ್ಧಾರ ಕೈಗೊಂಡಿದೆ ಎಂದು ಅರೋಪಿಸಿರುವ ಅವರು, ಗದ್ದರ್ ಅಂತ್ಯಕ್ರಿಯೆ ಸರ್ಕಾರಿ ಲಾಂಛನದಡಿ ಮಾಡುವ ಸರಕಾರದ ನಿರ್ಧಾರವನ್ನು ಒಪ್ಪಲಾಗದು ಎಂದು ಅವರು ಹೇಳಿದ್ದಾರೆ.