ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಇಷ್ಟು ಚಿಕ್ಕವಯಸ್ಸಿನಲ್ಲಿ ಹೃದಯಾಘಾತ ಎಂದರೆ ಆಘಾತವಾಗುತ್ತದೆ. ಆರೋಗ್ಯವಾಗಿ ನಗುನಗುತ್ತಾ ಬಾಳ್ವೆ ಮಾಡುವವರಿಗೆ ಏಕಾಏಕಿ ಹೀಗಾದರೆ ಮನಸ್ಸಿಗೆ ನೋವಾಗುತ್ತದೆ. ಆರೋಗ್ಯವಾಗಿ ಇರುವವರಿಗೆ ಇಂಥ ಸಾವು ಯಾರೂ ನಿರೀಕ್ಷೆ ಮಾಡಿರುವುದಿಲ್ಲ ಎಂದು ಹೇಳಿದ್ದಾರೆ.
ಕೋವಿಡ್ ಬಂದು ಹೋದ ನಂತರ ಚಿಕ್ಕ ವಯಸ್ಸಿನವರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಕೋವಿಡ್ ಬಂತು, ಹೋಯ್ತು ಎಂದುಕೊಳ್ಳುವಂತಿಲ್ಲ. ಕೋವಿಡ್ ಬಂದು ದೇಹದೊಳಗೆ ಏನೆಲ್ಲಾ ಮಾಡಿ ಹೋಗಿದೆಯೋ ತಿಳಿದಿಲ್ಲ. ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಗಮನವಹಿಸಿ. ಆಗಾಗ ಚೆಕಪ್ ಮಾಡಿಸಿಕೊಳ್ಳಿ ಎಂದಿದ್ದಾರೆ.