HEALTH | ಆರೋಗ್ಯವೇ ಭಾಗ್ಯ, ನಿಮ್ಮ ಹೆಲ್ತ್ ಚೆನ್ನಾಗಿರಬೇಕಂದ್ರೆ ಇಷ್ಟಂತೂ ಮಾಡಲೇಬೇಕು!

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ೪೪ ವರ್ಷದ ಸ್ಪಂದನಾಗೆ ಹೃದಯಾಘಾತವಾದ ಸುದ್ದಿ ತಿಳಿದು ಇಡೀ ಸ್ಯಾಂಡಲ್‌ವುಡ್ ಶಾಕ್‌ನಲ್ಲಿದೆ. ಈ ಬೆನ್ನಲ್ಲೇ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಕೆಲಸ ಕಾರ್ಯ, ಒತ್ತಡದ ಜೀವನ, ಅತಿಯಾದ ಫಿಟ್ನೆಸ್ ಎಲ್ಲವನ್ನೂ ಬಿಟ್ಟು ಆರೋಗ್ಯವಾಗಿ ಬದುಕಿದ್ದರೆ ಸಾಕು ಎಂದು ಜನ ಅಂದುಕೊಳ್ಳುತ್ತಿದ್ದಾರೆ. ಸದಾ ಆರೋಗ್ಯವಾಗಿರಲು ನಿಮ್ಮ ಪ್ರಯತ್ನವೂ ಮುಖ್ಯ.. ಈ ವಿಷಯಗಳ ಬಗ್ಗೆ ಗಮನ ಇರಲಿ

  • ದಿನಕ್ಕೆ ಅರ್ಧ ಗಂಟೆಯಾದ್ರೂ ಆಕ್ಟೀವ್ ಆಗಿರಿ, ಓಡುವುದು, ವಾಕ್ ಮಾಡುವುದು, ಡ್ಯಾನ್ಸ್, ಸ್ಪೋರ್ಟ್, ಯೋಗ ಯಾವುದಾದರೂ ಪರವಾಗಿಲ್ಲ.
  • ಅತಿಯಾದ ಫ್ಯಾಟ್ ಇರುವ ಆಹಾರ ಬಿಟ್ಟು ಲೋ ಫ್ಯಾಟ್, ಹಣ್ಣು, ತರಕಾರಿ ಬಗ್ಗೆ ಗಮನ ಕೊಡಿ
  • ಸುರಕ್ಷತೆ ಬಗ್ಗೆ ಗಮನ ಇರಲಿ, ಸೀಟ್ ಬೆಲ್ಟ್ ಧರಿಸುವುದು, ಮನೆಯಲ್ಲಿ ಗ್ಯಾಸ್ ಲೀಕ್ ಡಿಟೆಕ್ಟರ್‌ಗಳನ್ನು ಅಳವಡಿಸುವುದು ಹೀಗೆ ನಿಮ್ಮ ಸುತ್ತ ಮುತ್ತ ಏನು ನಡೆಯುತ್ತಿದೆ ಎನ್ನುವ ಬಗ್ಗೆ ಎಚ್ಚರ ಇರಲಿ.
  • ಧೂಮಪಾನ ಮಾಡಬೇಡಿ, ಈಗಾಗಲೇ ಮಾಡುತ್ತಿದ್ದರೆ ಅದನ್ನು ಈಕೂಡಲೇ ನಿಲ್ಲಿಸಿ.
  • ಮದ್ಯಪಾನಿಗಳಾಗಿದ್ದರೆ ನಿಮ್ಮ ಮಿತಿ ನೆನಪಿರಲಿ, ಸಾಧ್ಯವಾದರೆ ಈ ಅಭ್ಯಾಸ ಬಿಟ್ಟುಬಿಡಿ, ಕುಡಿದು ಗಾಡಿ ಓಡಿಸಬೇಡಿ. ಗರ್ಭಿಣಿಯರು ಕುಡಿಯಬೇಡಿ.
  • ಲೈಂಗಿಕ ಸಮಸ್ಯೆಗಳ ಬಗ್ಗೆ ಗಮನ ಇರಲಿ, ಪ್ರತಿ ಬಾರಿಯೂ ಪ್ರೊಟೆಕ್ಷನ್ ಬಳಕೆ ಮಾಡಿ. ಲೈಂಗಿಕ ರೋಗಗಳ ಬಗ್ಗೆ ಅರಿತುಕೊಳ್ಳಿ.
  • ಪ್ರತಿ ದಿನವೂ ಎರಡು ಬಾರಿ ಬ್ರಶ್ ಮಾಡಿ, ಡೆಂಟಲ್ ಫ್ಲಾಸ್ ಬಳಕೆ ಮಾಡಿ.
  • ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ಬಿಸಿಲಿನಲ್ಲಿ ಓಡಾಡುವುದನ್ನು ಆದಷ್ಟು ಕಡಿಮೆ ಮಾಡಿ. ಸನ್‌ಸ್ಕ್ರೀನ್ ಬಳಕೆಗೆ ಆದ್ಯತೆ ನೀಡಿ
  • ಉತ್ತಮ ನಿದ್ದೆ, ಸ್ನೇಹಿತರ ಜೊತೆ ಮಾತುತಕೆ, ಕುಟುಂಬದವರ ಜತೆ ಖುಷಿಯೂ ಕೂಡ ಮುಖ್ಯ. ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನವಹಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!