ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಕ್ ಫ್ರಂ ಹೋಂ ಅಂತ ಖುಷಿ ಪಡುವ ಮುನ್ನ ಇದರಿಂದ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಒಮ್ಮೆ ತಿಳಿಯಬೇಕು. ಹೌದು ವರ್ಕ್ ಫ್ರಂ ಹೋಂ ನಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದ್ರೆ ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಇಲ್ಲಿ ತಿಳಿಯೋಣ.
ಒಂಟಿತನ:
ಕಚೇರಿಯ ಕೆಲಸಕ್ಕೂ ಮನೆಯಿಂದಲೇ ಮಾಡುವ ಕೆಲಸಕ್ಕೂ ತುಂಬಾನೆ ವ್ಯತ್ಯಾಸ ಇದೆ. ಕಚೇರಿಯ ಕೆಲಸ ಸಂವಹನ, ಲವಲವಿಕೆಯಿಂದ ಕೂಡಿರುತ್ತದೆ. ಆದರೆ ವರ್ಕ್ ಫ್ರಂ ಹೋಂ ಮಾಡಿದಾಗ ಯಾರ ಜೊತೆಯೂ ಮಾತನಾಡದೆ ಒಂದೇ ಕಡೆ ಕೂತು ಕೆಲಸ ಮಾಡುತ್ತೇವೆ, ಇದರಿಂದ ಒಂಟಿತನ ಕಾಡುತ್ತದೆ.
ರಿಲ್ಯಾಕ್ಸ್ ಆಗೋಕೆ ಸಾಧ್ಯವಿಲ್ಲ:
ಕಚೇರಿಯಲ್ಲಿ ಟಿ, ಕಾಫಿ ಬ್ರೇಕ್ ಅಂತ ರಾಜಾರೋಷವಾಗಿ ಎದ್ದು ಹೋಗುತ್ತೇವೆ. ಆದರೆ ವರ್ಕ್ ಫ್ರಂ ಹೋಂನಲ್ಲಿ ಇದ್ದರೆ ಮೀಟಿಂಗ್ ಕಾಲ್‌ನಲ್ಲಿದ್ದರೆ ಊಟ ಬಿಟ್ಟು ಕಾಲ್ ಸ್ವೀಕರಿಸುತ್ತೇವೆ. ಹೀಗಾಗಿ ವರ್ಕ್ ಫ್ರಂ ನಮ್ಮಲ್ಲಿ ಮಾನಸಿಕ ಒತ್ತಡ ಹೆಚ್ಚು ಮಾಡುತ್ತದೆ.
ಕಲಿಕೆಗೆ ಅವಕಾಶ ಕಡಿಮೆ:
ಕಚೇರಿಗೆ ಹೋಗಿ ಕೆಲಸ ಮಾಡುವಾಗ ನಮ್ಮ ಕೆಲಸದ ಬಗ್ಗೆ ಮಾತ್ರವಲ್ಲ ಇತರ ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತದೆ. ಆದರೆ ಮನೆಯಲ್ಲಿಯೇ ಕೆಲಸ ಮಾಡಿದರೆ ಸಹೋದ್ಯೋಗಿಗಳ ಜೊತೆ ಬೆರೆಯುವುದು ಕಡಿಮೆಯಾಗುವುದು, ಈ ಕಾರಣದಿಂದಾಗಿ ಹೊಸ ವಿಷಯಗಳ ಕಲಿಕೆಗೆ ಅವಕಾಶ ಕಡಿಮೆ.
ವೈಯಕ್ತಿಕ ಹಾಗೂ ವೃತ್ತಿ ಜೀವನ ಬ್ಯಾಲೆನ್ಸ್ ಮಾಡುವುದು ಕಷ್ಟ
ವರ್ಕ್ ಫ್ರಂ ಹೋಂ ಮಾಡುವಾಗ ಕೆಲವೊಮ್ಮೆ ಮನೆಯ ಅವಶ್ಯಕತೆಗಳ ಕಡೆಗೆ ಗಮನ ನೀಡಬೇಕಾಗುತ್ತದೆ, ಇದರಿಂದ ಕೆಲಸಕ್ಕೆ ತೊಂದರೆಯಾಗುವುದು. ಇದರಿಂದಾಗಿ ಮಾನಸಿಕ ಒತ್ತಡ ಕೂಡ ಹೆಚ್ಚುತ್ತದೆ.