ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಆಪ್ತ ಗ್ರ್ಯಾನೈಟ್ ಉದ್ಯಮಿ ಕೃಷ್ಣೇಗೌಡನನ್ನು ಹಾಡ ಹಗಲೇ ರೌಡಿಗಳು ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಹಾಸನದಲ್ಲಿ ನಡೆದಿದೆ.
ತಮ್ಮ ಸ್ವಂತ ಗ್ರ್ಯಾನೈಟ್ ಫ್ಯಾಕ್ಟರಿಗೆ ಬೆಳಗ್ಗೆ ಪ್ರತಿನಿತ್ಯದ ಮಾದರಿಯಲ್ಲಿ ಹೋಗಿದ್ದಾರೆ. ಆಗ, ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿದ, ಕಾರಿನಿಂದ ಇಳಿದ ಕೃಷ್ಣೇಗೌಡ( 53)ನನ್ನು ಏಕಾಏಕಿ ಧಾಳಿ ಮಾಡಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ತಮ್ಮ ಗ್ರ್ಯಾನೈಟ್ ಫ್ಯಾಕ್ಟರಿಯ ಎದುರಲ್ಲೇ ಕೃಷ್ಣೇಗೌಡನ ಭೀಕರ ಕೊಲೆ ಮಾಡಲಾಗಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಕೊಚ್ಚಿ ಹಾಕಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.