FOOD| ಘಮಘಮಿಸುವ ಅವಲಕ್ಕಿ ಲಾಡು ತಿಂದರೆ ಸ್ವರ್ಗಕ್ಕೆ ಮೂರೇ ಹೆಜ್ಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿಹಿ ತಿನಿಸುಗಳ ರುಚಿಯ ತಿಂದವನೇ ಬಲ್ಲ ಅದರ ಸವಿಯ ಎನ್ನುವ ಮಾತೇ ಇದೆ. ಅಂದಮೇಲೆ ಒಮ್ಮೆಯಾದರೂ ನೀವು ರುಚಿಯಾದ ಮತ್ತು ಘಮಘಮಿಸುವ ಈ ಅವಲಕ್ಕಿ ಲಾಡು ತಿಂದರೆ ಸಾಕು ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ ಭಾಸವಾಗುತ್ತದೆ. ಹಾಗಾದ್ರೆ ಮತ್ಯಾಕೆ ತಡ ಈಗಲೇ ಮಾಡಿ ನೋಡಿ ಅವಲಕ್ಕಿ ಲಾಡು.

ಬೇಕಾಗುವ ಸಾಮಾಗ್ರಿಗಳು:

* ಅವಲಕ್ಕಿ (ದಪ್ಪ ಮತ್ತು ತೆಳು ಅವಲಕ್ಕಿಯನ್ನು ಆರಿಸಿಕೊಳ್ಳಬಹುದಾಗಿದೆ)
* ತೆಂಗಿನ ಹುಡಿ
* ರಿಫೈಂಡ್ ಸಕ್ಕರೆ
* ಏಲಕ್ಕಿ ಹುಡಿ
* ಗೋಡಂಬಿ
* ಬಾದಾಮಿ
* ಪಿಸ್ತಾ
* ದ್ರಾಕ್ಷಿ
* ತುಪ್ಪ
* ಹಾಲು
* ರೋಸ್ ವಾಟರ್

ಮಾಡುವ ವಿಧಾನ:

* ಮೊದಲು ಅವಲಕ್ಕಿಯನ್ನು ಕ್ಲೀನ್‌ ಮಾಡಿಕೊಳ್ಳಿ.
* ಈಗ ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಅವಲಕ್ಕಿಯನ್ನು ಹಾಕಿ ಹುರಿದುಕೊಳ್ಳಿ.
* ಹುರಿದ ಅವಲಕ್ಕಿಗೆ ತೆಂಗಿನ ತುರಿ ಪೌಡರ್ ಅನ್ನು ಸೇರಿಸಿ ಮಿಶ್ರ ಮಾಡಿ.
* ಇನ್ನೊಂದೆಡೆ ಸಕ್ಕರೆಯನ್ನು ಪುಡಿಯಾಗಿ ಗ್ರೈಂಡ್ ಮಾಡಿಕೊಳ್ಳಿ. * ಈಗ ಸಕ್ಕರೆಯನ್ನು ಅವಲಕ್ಕಿಗೆ ಸೇರಿಸಿ ಹಾಗೂ ತೆಂಗಿನ ತುರಿ ಪೌಡರ್ ಎಲ್ಲವನ್ನೂ ಗ್ರೈಂಡರ್‎ಗೆ ಹಾಕಿ ಹುಡಿ ಮಾಡಿ.
* ಈಗ ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಪಿಸ್ತಾವನ್ನು ಮಂದ ಉರಿಯಲ್ಲಿ ಹುರಿದುಕೊಳ್ಳಿ.
* ಅವಲಕ್ಕಿ ಮಿಶ್ರಣಕ್ಕೆ ಈ ಎಲ್ಲಾ ಡ್ರೈ ಪ್ರುಟ್ಸ್ ಅನ್ನು ಸೇರಿಸಿಕೊಳ್ಳಿ. * ಈಗಲಾಡು ಕಟ್ಟುವುದಕ್ಕಾಗಿ, 1 ಚಮಚದಷ್ಟು ತುಪ್ಪವನ್ನು ಸೇರಿಸಿಕೊಳ್ಳಿ.
* ಇನ್ನಷ್ಟು ಸುಗಂಧಕ್ಕಾಗಿ ರೋಸ್ ವಾಟರ್ ಅನ್ನು ಸೇರಿಸಿಕೊಳ್ಳಿ. * ಈಗ ಒಂದು ಚಪ್ಪಟೆಯ ತಟ್ಟೆಯನ್ನು ತೆಗೆದುಕೊಂಡು ಮಿಶ್ರಣದಿಂದ ಉಂಡೆಯನ್ನು ಸಿದ್ಧಪಡಿಸಿ.

ಈ ಲಾಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಒಂದು ವಾರದ ವರೆಗೆ ಸಂಗ್ರಹಿಸಿಟ್ಟುಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!