ಮಣಿಪುರ ನಮ್ಮ ಹೃದಯದ ಭಾಗ, ಇಲ್ಲಿ ಶಾಂತಿ ಮರುಸ್ಥಾಪನೆಯೇ ನಮ್ಮ ಧ್ಯೇಯ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರ ನಮ್ಮ ಹೃದಯದ ಭಾಗ, ಇಲ್ಲಿ ಶಾಂತಿ ಸ್ಥಾಪನೆ ಆಗುವವರೆಗೂ ಪ್ರಯತ್ನ ನಿಲ್ಲಿಸುವ ಮಾತೇ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮಣಿಪುರದ ಜನತೆಗೆ ಭರವಸೆಯ ಬೆಳಕಿನ ಅತೀ ಅವಶ್ಯವಿದ್ದು, ಪ್ರಧಾನಿ ಮೋದಿ ಜನರಿಗೆ ವಿಶ್ವಾಸ ನೀಡಿದ್ದಾರೆ. ಶಾಂತಿ ಮರುಸ್ಥಾಪನೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿದೆ. ನಮ್ಮ ಪ್ರಯತ್ನಗಳು ಶಾಂತಿ ಸ್ಥಾಪನೆಯಾಗುವವರೆಗೂ ಮುಂದುವರಿಯಲಿವೆ ಎಂದಿದ್ದಾರೆ.

ಮಹಿಳೆಯರ ವಿರುದ್ಧದ ಸಾಕಷ್ಟು ಕೀಳು ಮಟ್ಟದ ಅಪರಾಧ ಪ್ರಕರಣಗಳು ಕಾಣಿಸುತ್ತಿವೆ, ತಪ್ಪು ಮಾಡಿದವರು ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಕಠಿಣ ಶಿಕ್ಷೆಗೆ ಗುರಿಯಾಗಲೇಬೇಕು ಎಂದಿದ್ದಾರೆ.

ನಮ್ಮ ಹೃದಯದ ಭಾಗವಾದ ಮಣಿಪುರದಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಎದುರಾಗಿರುವುದು ದುಃಖಕರ ಹಾಗೆಂದು ಸುಮ್ಮನೆ ಕೂರುವುದಿಲ್ಲ. ಸತತ ಪ್ರಯತ್ನದಿಂದ ಮಣಿಪುರದಲ್ಲಿ ಶಾಂತಿ ಪುನಃಸ್ಥಾಪನೆ ಮಾಡಲಾಗುತ್ತದೆ. ಮಣಿಪುರದ ಜನತೆಗೆ ನಾನು ಭರವಸೆ ನೀಡುತ್ತೇನೆ, ಅದರಲ್ಲಿಯೂ ವಿಶೇಷವಾಗಿ ಮಹಿಳೆಯರಿಗೆ ಭರವಸೆ ನೀಡುತ್ತೇನೆ ಈ ದೇಶ ಸದಾ ನಿಮ್ಮೊಂದಿಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!