ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಒಂಬತ್ತು ಬಿಬಿಎಂಪಿ ನೌಕರರಿಗೆ ತೀವ್ರ ಸುಟ್ಟ ಗಾಯಗಳಾಗಿವೆ.
ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಡರಾತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲಾ ಗಾಯಾಗಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಎಲ್ಲಾ ಗಾಯಾಳುಗಳನ್ನು ಐಸಿಯುಗೆ ಶಿಫ್ಟ್ ಮಾಡಿ ಎಂದು ಸೂಚಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಇಂಜಿನಿಯರ್ ಕೆ. ಪ್ರಹ್ಲಾದ್ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಮಿಡ್ ನೈಟ್ ಸಭೆ ನಡೆಸಿದ್ದಾರೆ. ಕೆಮಿಕಲ್‌ನಿಂದ ಬೆಂಕಿ ಹೊತ್ತಿದೆ ಎಂದು ಹೇಳಲಾಗಿದ್ದು, ಈ ಅವಘಡ ಆಗಿದ್ದು ಹೇಗೆ ಎನ್ನುವ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಬಿಬಿಎಂಪಿ ಕಡತಗಳ ಸಂರಕ್ಷತೆ ಅತಿ ಮುಖ್ಯ ಈ ಅವಘಡ ನೈಸರ್ಗಿಕವೋ ಅಥವಾ ಯಾರಾದರೂ ಬೇಕಂತಲೇ ಮಾಡಿದ್ದೋ ಎನ್ನುವ ಆಯಾಮದಲ್ಲಿಯೂ ತನಿಖೆ ನಡೆಯಲಿದೆ.
ಇಂಧನ ಇಲಾಖೆ ಅಧಿಕಾರಿಗಳಿಂದ, ಆಂತರಿಕ ತನಿಖೆ ಹಾಗೂ ಪೊಲೀಸ್ ಇಲಾಖೆಯಿಂದ ತನಿಖೆ ಈ ಮೂರೂ ಆಯಾಮದಲ್ಲಿ ತನಿಖೆಯ ಕೈಗೊಳ್ಳಲಾಗುತ್ತದೆ. ಕಚೇರಿಯಲ್ಲಿ ಬಹುತೇಕ ಗಾಯಗೊಂಡವರೆಲ್ಲಾ ಯಂಗ್ ಆಫೀಸರ‍್ಸ್ ಆಗಿದ್ದಾರೆ. ಕೆಲವರಿಗೆ ಇನ್ನೂ ಮದುವೆಯೂ ಆಗಿಲ್ಲ. ಈ ರೀತಿ ಆಗಿದ್ದು ಹೇಗೆ ಎಂದು ತಿಳಿಯುವ ಪ್ರಯತ್ನ ಮಾಡುತ್ತೇವೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.
ಬಿಬಿಎಂಪಿಯ ಟೆಕ್ನಿಕಲ್ ಲ್ಯಾಬ್‌ನಲ್ಲಿ ರಸ್ತೆ, ಕಟ್ಟಡ ಕಾಮಗಾರಿಗಳ ಗುಣಮಟ್ಟದ ಪರೀಕ್ಷೆ ಮಾಡಲಾಗುತ್ತದೆ. ಈ ಪರೀಕ್ಷೆಗೆ ಬೆಂಜಿಮಿನ್ ಎನ್ನುವ ಕೆಮಿಕಲ್ ಬಳಕೆ ಮಾಡಲಾಗುತ್ತದೆ. ಈ ಕೆಮಿಕಲ್‌ನಿಂದ ಬೆಂಕಿ ಹೊತ್ತುವ ಸಾಧ್ಯತೆ ಇದೆ. ಬಿಬಿಎಂಪಿ ನೌಕಕರು ಕಾರ್ಯನಿರ್ವಹಿಸುವ ವೇಳೆಯೇ ಬೆಂಕಿ ಹೊತ್ತಿದೆ.
ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದಾಗಿ ಹಲವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಎಕ್ಸಿಕ್ಯುಟಿವ್ ಚೀಫ್ ಇಂಜಿನಿಯರ್ ಶಿವಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಎಲ್ಲರೂ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.