ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಇಂದು ನೆಹರು ಟ್ರೋಫಿ ಬೋಟ್ ರೇಸ್ ನಡೆಯಲಿದ್ದು, ಈ ಬಾರಿ ಬರೋಬ್ಬರಿ 72 ತಂಡಗಳು ರೇಸ್‌ನಲ್ಲಿ ಭಾಗಿಯಾಗಲಿವೆ.
ಇಂದು ಮಧ್ಯಾಹ್ನ ಆಲಪ್ಪುಳದಲ್ಲಿ ರೇಸ್‌ಗೆ ಅಧಿಕೃತ ಚಾಲನೆ ಸಿಗಲಿದ್ದು, ರೋಚಕ ರೇಸ್ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಕೆರೆಯ ಸುತ್ತಮುತ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಬೋಟ್ ರೇಸ್‌ನ ನಿಯಮ ಪಾಲಿಸದ ಬೋಟ್‌ಗಳನ್ನು ಸ್ಥಳದಲ್ಲಿಯೇ ರೇಸ್‌ನಿಂದ ಡಿಸ್‌ಕ್ವಾಲಿಫೈ ಮಾಡಲಾಗುತ್ತದೆ. ಕೆರೆಯ ಸುತ್ತಮುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸ್ಪರ್ಧೆ ವೀಕ್ಷಿಸಲು ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಬಸ್ ಹಾಗೂ ಬೋಟ್ ವ್ಯವಸ್ಥೆ ಮಾಡಲಾಗಿದೆ.