ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಳಗ್ಗೆ ತಿರುಮಲದ ಮೆಟ್ಟಿಲು ದಾರಿಯಲ್ಲಿ ಚಿರತೆಯ ದಾಳಿಗೆ ಬಾಲಕಿ ಸಾವನ್ನಪ್ಪಿದ ಘಟನೆ ಸಂಚಲನ ಮೂಡಿಸುತ್ತಿದೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಟಿಟಿಡಿ ಇಒ ಧರ್ಮಾ ರೆಡ್ಡಿ, ತಿರುಮಲ ಪಾದಚಾರಿ ಮಾರ್ಗದಲ್ಲಿ ಮಗುವಿನ ಮೇಲೆ ಚಿರತೆಯೊಂದು ದಾಳಿ ನಡೆಸಿರುವುದು ಅತ್ಯಂತ ದುಃಖ ತಂದಿದೆ. ಇದಲ್ಲದೆ, ತಿರುಮಲ ನಡಿಗೆ ಮಾರ್ಗದಲ್ಲಿ 500 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದರು.
ಚಿರತೆ ಸೆರೆ ಹಿಡಿಯಲು ಬೋನ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿಂದೆಯೂ ಬೋನ್ ಇಟ್ಟು ಚಿರತೆ ಸೆರೆ ಹಿಡಿದಿದ್ದನ್ನು ನೆನಪಿಸಿದ ಅವರು.. ಕಾಲ್ನಡಿಗೆ ಮಾರ್ಗದಲ್ಲಿ ಅರಣ್ಯ, ಪೊಲೀಸ್ ಹಾಗೂ ಟಿಟಿಡಿ ಜಂಟಿಯಾಗಿ ಬಿಗಿ ಭದ್ರತೆ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಸಂಜೆ 6ರಿಂದ ಬೆಳಗ್ಗೆ 6ರವರೆಗೆ ತಿರುಮಲ ಘಾಟ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುವುದು.2 ಗಂಟೆಗಳ ಕಾಲ ಪಾದಚಾರಿ ಮಾರ್ಗದಲ್ಲಿ ಭಕ್ತರಿಗೆ ಅವಕಾಶ ನೀಡುವ ಕುರಿತು ಪರಿಶೀಲಿಸಲಾಗುವುದು ಎಂದು ಧರ್ಮಾರೆಡ್ಡಿ ತಿಳಿಸಿದರು. ಚಿಕ್ಕ ಮಕ್ಕಳೊಂದಿಗೆ ಬರುವ ಪಾಲಕರು ಎಚ್ಚರಿಕೆಯಿಂದ ನಿಗಾ ವಹಿಸುವಂತೆ ಟಿಟಿಡಿ ಈವೋ ಧರ್ಮಾ ರೆಡ್ಡಿ ಭಕ್ತರಿಗೆ ಮನವಿ ಮಾಡಿದರು. ಸಂತ್ರಸ್ತ ಕುಟುಂಬಕ್ಕೆ ರೂ. 5 ಲಕ್ಷ ಹಾಗೂ ಅರಣ್ಯ ಇಲಾಖೆಯಿಂದ 5 ಲಕ್ಷ ಹೆಚ್ಚುವರಿ ಹಣ ನೀಡುವುದಾಗಿ ಘೋಷಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಟಿಟಿಡಿ ಇಒ ಧರ್ಮ ರೆಡ್ಡಿ ತಿಳಿಸಿದರು.