ಹೊಸ ದಿಗಂತ ವರದಿ, ಬಳ್ಳಾರಿ:
ಮುಂಬರುವ 2024ರಲ್ಲಿ ನಡೆಯಲಿರುವ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿರುವೆ, ಈಗಾಗಲೇ ಪಕ್ಷದ ವರೀಷ್ಠರಿಗೆ ಅರ್ಜಿ ಸಲ್ಲಿಸಿರುವೆ, ಕಳೆದ ಬಾರಿ ಕಡಿಮೆ ಅಂತರಗಳಿಂದ ಪರಾಭವಗೊಂಡಿದ್ದು, ಈ ಬಾರಿ ಹೆಚ್ಚಿನ ಮತಗಳ ಅಂತರಗಳಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಮುಖಂಡ, ಬೂಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಅವರು ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸ್ವಾತಂತ್ರ್ಯ ದೊರೆತಾಗನಿಂದಲೂ ಇಲ್ಲಿವರೆಗೂ ಕೇವಲ ಕಲಬುರ್ಗಿ, ಬೀದರ್ ಜಿಲ್ಲೆಯವರು ಮಾತ್ರ ಆಯ್ಕೆಯಾಗುತ್ತಿದ್ದಾರೆ, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಿಂದ ಇಲ್ಲಿವರೆಗೂ ಯಾರೂ ಆಯ್ಕೆಯಾಗಿಲ್ಲ. ಈ ಬಾರಿ ಕ್ಷೇತ್ರದ ಮತದಾರರು ನಮ್ಮ ಭಾಗದ ಅಭ್ಯರ್ಥಿಗಳನ್ನು ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಕಡಿಮೆ ಅಂತರಗಳಿಂದ ಪರಾಭವಗೊಂಡಿರುವೆ, ಈ ಬಾರಿ ಮತ್ತೋಮ್ಮೆ ಪ್ರಯತ್ನ ಮಾಡುವೆ, ನನ್ನ ಜನ, ಕ್ಷೇತ್ರದ ಮತದಾರರು ಈ ಬಾರಿ ಖಂಡಿತ ಆರ್ಶಿವಾದ ಮಾಡುವೆ ವಿಶ್ವಾಸವಿದೆ ಎಂದರು.
ಈಗಾಗಲೇ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಎಲ್ಲ ಶಾಸಕರನ್ನು ಭೇಟಿ ಮಾಡಿ ಬೆಂಬಲ ಕೋರಿರುವೆ, ಎಲ್ಲರೂ ಸ್ಪಂಧಿಸಿದ್ದಾರೆ. ಕಳೆದ ಬಾರಿ ಆಯ್ಕೆಯಾದ ನಮ್ಮಪಕ್ಷದವರು ಇಲ್ಲಿವರೆಗೂ ಬಳ್ಳಾರಿಗೆ ಭೇಟಿ ನೀಡಿಲ್ಲ, ಮತ್ತೆ ಸ್ಪರ್ದೆ ಬಯಸಿ ಟಿಕೇಟ್ ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಇವರ ಜೊತೆಗೆ ಅನೇಕ ಜನರು ಟಿಕೇಟ್ ಆಕಾಂಕ್ಷೆಗಳಿದ್ದು, ತೀರ್ಮಾನ ಹೈ ಕಮಾಂಡ್ ಗೆ ಬಿಟ್ಟಿದ್ದು, ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ, ಈ ಬಾರಿ ಗೆಲುವು ನಮ್ಮದಾಗಲಿದೆ ಎಂದರು.
ನವಂಬರ್ 2021ರೊಳಗೆ ಯಾವುದೇ ವಿಶ್ವವಿದ್ಯಾಲಯ ಇರಲಿ, ಪದವಿಯಲ್ಲಿ ಉತ್ತೀರ್ಣರಾದವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು, ಕಳೆದ ಚುನಾವಣೆಯಲ್ಲಿ 65 ಸಾವಿರಕ್ಕೂ ಹೆಚ್ಚು ಮತದಾರರಿದ್ದರು. ಅಖಂಡ ಜಿಲ್ಲೆಯಲ್ಲಿ 23 ಸಾವಿರ ಮತದಾರರಿದ್ದರು. ಈ ಬಾರಿಯ ಚುನಾವಣೆ ಹಿನ್ನೆಲೆ ಈಗಾಗಲೇ ಹೆಸರು ಸೇರ್ಪಡೆಗೆ ಚಾಲನೆ ನೀಡಲಾಗಿದೆ.
ಪದವೀಧರರಿಗೆ ಅರ್ಜಿ ಫಾರ್ಮ್ ನೀಡಿ ಅಗತ್ಯ ದಾಖಲೆಗಳೊಂದಿಗೆ ನೊಂದಣಿ ಮಾಡಿಸುವ ಪ್ರಕ್ರೀಯೆ ನಡೆದಿದ್ದು, ನಂತರ ತಹಸೀಲ್ದಾರ್ ಅವರಿಗೆ ನೀಡಲಾಗುವುದು. ಅರ್ಜಿದಾರರು, ಪದವಿ ಪಡೆದ ಅಂಕಪಟ್ಟಿ, ಅಥವಾ ಉತ್ತೀರ್ಣರಾದ ಸರ್ಟಿಫಿಕೇಟ್ ಅಥವಾ ಕಾನ್ವಕೇಶನ್ ನೊಂದಿಗೆ ಎರಡು ಭಾವಚಿತ್ರಗಳನ್ನು ನೀಡಬೇಕು ಎಂದರು.