ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮಹಿಳಾ ಆಯೋಗ(DCW)ದ 181 ಸಹಾಯವಾಣಿಗೆ ಜುಲೈ 2022 ರಿಂದ ಜೂನ್ 2023 ರ ವರೆಗೆ 6.30 ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ಶನಿವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಳ್ಳಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಗೃಹ ಹಿಂಸೆ, ನೆರೆಹೊರೆಯವರೊಂದಿಗೆ ಸಂಘರ್ಷ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ, ಪೋಕ್ಸೊ, ಅಪಹರಣ ಹಾಗೂ ಸೈಬರ್ ಅಪರಾಧಗಳಂತಹ 92,004 ‘ ವಿಶಿಷ್ಟ ಪ್ರಕರಣಗಳು’ ಸಹಾಯವಾಣಿ ಮೂಲಕ ದಾಖಲಾಗಿವೆ ಎಂದು ತಿಳಿಸಿದ್ದಾರೆ.
“ನಾವು DCW ನ ಮಹಿಳಾ ಸಹಾಯವಾಣಿ 181ರ ವಾರ್ಷಿಕ ಡೇಟಾವನ್ನು ಬಿಡುಗಡೆ ಮಾಡಿದ್ದೇವೆ. ಡೇಟಾದಲ್ಲಿ, DCWನ 181 ಸಹಾಯವಾಣಿಯು ಕಳೆದ 7 ವರ್ಷಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದೆ. ಕಳೆದ ವರ್ಷ 6,30,000 ಕರೆಗಳು ಬಂದಿವೆ ಎಂದು ಅವರು ಹೇಳಿದ್ದಾರೆ.