ಭಾರತದ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದ ಪಾಕ್ ಪ್ರಜೆ ಸೀಮಾ ಹೈದರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಬ್ ಜೀ ಪ್ರಿಯಕರನಿಗಾಗಿ ನೇಪಾಳದ ಮೂಲಕ ಅಕ್ರಮವಾಗಿ ಭಾರತಕ್ಕೆ ಆಗಮಿಸಿದ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಅವರು ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.

ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿರುವ ವಕೀಲ ಎಪಿ ಸಿಂಗ್ ಅವರ ನಿವಾಸದಲ್ಲಿ ಭಾನುವಾರ ‘ಹರ್ ಘರ್ ತಿರಂಗ’ ಆಚರಣೆಯಲ್ಲಿ ಸೀಮಾ ಹಾಗೂ ಸಚಿನ್‌ ಪಾಲ್ಗೊಂಡಿದ್ದಾರೆ .ಈ ವೇಳೆ ಸೀಮಾ ತಮ್ಮ ಪತಿ ಸಚಿನ್ ಅವರೊಂದಿಗೆ ಭಾರತದ ಧ್ವಜವನ್ನು ಹಾರಿಸಿ ಸಂಭ್ರಮಿಸಿದ್ದಾರೆ.

ಸೀಮಾ ಹೈದರ್ (30) ಮತ್ತು ಅವರ ಭಾರತೀಯ ಪತಿ ಸಚಿನ್ ಮೀನಾ (22) ಇಬ್ಬರೂ ಪಬ್‌ಜಿ ಆಟವಾಡುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. ಈಗಾಗಲೇ ಗುಲಾಮ್ ಹೈದರ್ ಅವರನ್ನು ಮದುವೆಯಾಗಿದ್ದ ಸೀಮಾ ನಂತರ ಸಚಿನ್ ಜೊತೆ ಇರಲು ಅಕ್ರಮವಾಗಿ ಭಾರತಕ್ಕೆ ಬರಲು ನಿರ್ಧರಿಸಿದರು.ಬಳಿಕ ಹಿಂದುಧರ್ಮಕ್ಕೆ ಮತಾಂತರಗೊಂಡು ವಿವಾಹ ಮಾಡಿಕೊಂಡರು.

ಪಾಕಿಸ್ತಾನದ ಧ್ವಜ ಹಾರಿಸಿದ ಅಂಜು
ಅತ್ತ ಫೇಸ್‌ಬುಕ್ ಸ್ನೇಹಿತ ನಸ್ರುಲ್ಲಾರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದ ಭಾರತದ ಅಂಜು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನ ಮುಂಚಿತವಾಗಿ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಅಂಜು ಅವರು ನಸ್ರುಲ್ಲಾ ಅವರೊಂದಿಗೆ ಕೇಕ್ ಕತ್ತರಿಸಿ ಆಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!