ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ದೆಹಲಿ ಪೊಲೀಸರು ಮತ್ತು ಸೇನಾ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯ ಸಚಿವ ಅಜಯ್ ಭಟ್ ಮತ್ತು ಕಾರ್ಯದರ್ಶಿ ಗಿರಿಧರಬಿ ಅರಮನೆ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ದೆಹಲಿ ಇಂಟರ್-ಸರ್ವೀಸಸ್ ಮತ್ತು ದೆಹಲಿ ಪೊಲೀಸ್ ಗಾರ್ಡ್ ಪಡೆಗಳು ಪ್ರಧಾನಿ ಮೋದಿಗೆ ಸೆಲ್ಯೂಟ್ ಹೊಡೆದವು. ಬಳಿಕ ಪ್ರಧಾನಿ ಮೋದಿ ಸೇನಾ ಪಡೆಗಳ ಗೌರವ ವಂದನೆ ಸ್ವೀಕರಿಸಿದರು.
ಸೇನೆ, ವಾಯುಪಡೆ, ನೌಕಾಪಡೆ ಮತ್ತು ದೆಹಲಿ ಪೊಲೀಸ್ ಇಲಾಖೆಯ ತಲಾ ಒಬ್ಬ ಅಧಿಕಾರಿ ಸೇರಿದಂತೆ 25 ಸಿಬ್ಬಂದಿ ಸೆಲ್ಯೂಟ್ ಪರೇಡ್‌ನಲ್ಲಿ ಭಾಗವಹಿಸಿದ್ದರು. ನೌಕಾಪಡೆಯ ಅಧಿಕಾರಿ ಹಾಗೂ 24 ಸಿಬ್ಬಂದಿ ಈ ಪೆರೇಡ್‌ನಲ್ಲಿ ಭಾಗವಹಿಸಿದ್ದರು. ಈ ವರ್ಷ ಭಾರತೀಯ ಸೇನೆಯು ಪರೇಡ್ ಅನ್ನು ಸಂಯೋಜಿಸುವ ಜವಾಬ್ದಾರಿಯನ್ನು ಪಡೆದಿತ್ತು. ಹೆಚ್ಚುವರಿ ಡಿಸಿಪಿ ಸಂಧ್ಯಾ ಸ್ವಾಮಿ ದೆಹಲಿ ಪೊಲೀಸ್ ತಂಡವನ್ನು ಮುನ್ನಡೆಸಿದರು.
ಗೌರವ ವಂದನೆ ಸ್ವೀಕರಿಸಿದ ನಂತರ ಪ್ರಧಾನಿಯವರು ಕೆಂಪು ಕೋಟೆಯನ್ನು ತಲುಪಿದರು.