ಹೊಸ ದಿಗಂತ ವರದಿ, ವಿಜಯಪುರ:
ಬೈಕ್ ಡಿಕ್ಕಿಯಾಗಿ ಬಾಲಕನೊಬ್ಬ ಸಾವಿಗೀಡಾದ ಘಟನೆ ನಗರದ ಶಹಾಪೇಠಿ ರಸ್ತೆಯ ಸಿಎಂಸಿ ಕಾಲೋನಿ ಬಳಿ ಮಂಗಳವಾರ ನಡೆದಿದೆ.
ಮೃತಪಟ್ಟವನನ್ನು ಸಿಎಂಸಿ ಕಾಲೋನಿ ನಿವಾಸಿ ನೀತುನ ಕಾಂಬಳೆ (7) ಎಂದು ಗುರುತಿಸಲಾಗಿದೆ.
ನೀತುನ ಕಾಂಬಳೆ ಬಾಲಕ ಇಲ್ಲಿನ ರಸ್ತೆಯಲ್ಲಿ ತೆರಳುತ್ತಿದ್ದಾಗ, ಬೈಕ್ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಅಸುನೀಗಿದ್ದಾನೆ.
ಈ ಸಂಬಂಧ ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.