ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‍ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಂತಹ ಫಿಲ್ಮ್ ಸಿಟಿಯನ್ನು ಗೋವಾದಲ್ಲಿ ಸ್ಥಾಪಿಸಲಾಗುವುದು ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಘೋಷಿಸಿದರು. ಗೋವಾದಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ ಎಂದು ಹೇಳಿದರು.
ಸಾಖಳಿಯಲ್ಲಿ ಆಯೋಜಿಸಿದ್ದ ಐದು ದಿನಗಳ ಚಲನಚಿತ್ರ ನಿರ್ಮಾಣ ಕಾರ್ಯಾಗಾರ ಉಧ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ , ಹೈದರಾಬಾದ್‍ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಂತೆಯೇ ಇರುತ್ತದೆ ಆದರೆ ಗಾತ್ರದಲ್ಲಿ ಚಿಕ್ಕದಾಗಿರಲಿದೆ. ರಾಜ್ಯದಲ್ಲಿ ಫಿಲ್ಮ್ ಸಿಟಿಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಸಾವಂತ್ ಹೇಳಿದರು. ಅಲ್ಲದೆ ದಕ್ಷಿಣ ಗೋವಾದ ಮಡಗಾಂವ್ ನಲ್ಲಿ ಮಕ್ಕಳ ಚಿತ್ರೋತ್ಸವ ನಡೆಯಲಿದೆ ಎಂದರು.
ಮಕ್ಕಳ ಚಲನಚಿತ್ರೋತ್ಸವವು ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮುಂಚಿತವಾಗಿ ನವೆಂಬರ್ 20 ರಿಂದ 28 ರವರೆಗೆ ಮಡಗಾಂವ್‍ನಲ್ಲಿ ನಡೆಯಲಿದೆ. ಸಾವಂತ್ ಹೇಳಿದರು.