ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವ ನಿರ್ವಾಣ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ನಟಿಸಿರುವ ಖುಷಿ ಒಂದು ಲವ್ ರೊಮ್ಯಾಂಟಿಕ್ ಎಂಟರ್ಟೈನರ್ ಆಗಿದೆ. ಖುಷಿ ಚಿತ್ರತಂಡ ಇತ್ತೀಚೆಗಷ್ಟೇ ಪ್ರಚಾರ ಆರಂಭಿಸಿದ್ದು, ಆಗಸ್ಟ್ 15 ರಂದು, ಸಿನಿಮಾದ ಆಡಿಯೋ ಲಾಂಚ್ ಕಾಋಯಕ್ರಮ ಆಯೋಜಿಸಿತ್ತು. ಈ ಈವೆಂಟ್ನಲ್ಲಿ ಸಮಂತಾ, ವಿಜಯ್ ನೃತ್ಯ ಟ್ರೋಲಿಗರಿಗೆ ಆಹಾರವಾಗಿದ್ದಂತೂ ಸುಳ್ಳಲ್ಲ.
ಚಿತ್ರತಂಡ ಹೈದರಾಬಾದ್ ಹೆಚ್ಐಸಿಸಿ ಕನ್ವೆನ್ಷನ್ನಲ್ಲಿ ಸಂಜೆ 6 ರಿಂದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಾಹಿಬ್, ಸಿದ್ ಶ್ರೀರಾಮ್, ಜಾವೇದ್ ಅಲಿ, ಅನುರಾಗ್ ಕುಲಕರ್ಣಿ, ಹರಿಚರಂ ಮತ್ತು ಚಿನ್ಮಾಯಿ ನೇರ ಪ್ರದರ್ಶನ ನೀಡಿದರು.
ಆದರೆ ಈ ಸಮಾರಂಭದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ಖುಷಿಯ ಹಾಡುಗಳಿಗೆ ವೇದಿಕೆ ಮೇಲೆ ಹುಚ್ಚೆದ್ದು ಕುಣಿದಿದ್ದಾರೆ. ಈವೆಂಟ್ನಲ್ಲಿ ವಿಜಯ್ ಶರ್ಟ್ ಕಳಚಿ ಸಮಂತಾ ಅವರೊಂದಿಗೆ ಡ್ಯಾನ್ಸ್ ಮಾಡಿದ್ದು ಈ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗಿವೆ. ಸಾಮಾನ್ಯವಾಗಿ ಇಂತಹ ಈವೆಂಟ್ಗಳಲ್ಲಿ ಈ ರೀತಿ ಯಾವ ನಾಯಕ-ನಾಯಕಿಯೂ ನೃತ್ಯ ಮಾಡೋದಿಲ್ಲ. ಇವರಿಬ್ಬರು ಸೈಡ್ ಡ್ಯಾನ್ಸರ್ಗಳಂತೆ ಕುಣಿದಿದ್ದಾರೆಂದು ಟ್ರೋಲ್ ಮಾಡುತ್ತಿದ್ದಾರೆ. ಸಮಂತಾ ಅಭಿಮಾನಿಗಳೂ ಕೂಡ ಬೇಸರಿಸಿಕೊಂಡಿದ್ದು, ಹಿಂಗ್ಯಾಕೆ ಎಂದು ಪ್ರಶ್ನಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ವಿರುದ್ಧವೂ ಮೀಮ್ಸ್, ಟ್ರೋಲ್ಗಳು ಬರುತ್ತಿವೆ. ಮತ್ತೊಂದೆಡೆ, ನಟ ನಾಗ ಚೈತನ್ಯ ಅಭಿಮಾನಿಗಳು ಕೂಡ ಈ ಡ್ಯಾನ್ಸ್ ನೋಡಿ ನೆಗೆಟಿವ್ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.