ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಆವರಣದಲ್ಲಿ ಆಯೋಜಿಸಿದ್ದ ʻಶ್ರೀರಾಮ ಕಥಾʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ʻನಾನು ಒಬ್ಬ ಹಿಂದು ಆಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಪ್ರಧಾನಿಯಾಗಿ ಅಲ್ಲʼ ಎಂಬ ಮಾತನ್ನು ಹೇಳಿದರು. ನಂಬಿಕೆ ಆತನ ವೈಯಕ್ತಿಕ ವಿಚಾರವಾಗಿದ್ದು, ಅವರ ಜೀವನದ ಪ್ರತಿಯೊಂದು ಅಂಶದಲ್ಲೂ ಧರ್ಮವು ಮಾರ್ಗದರ್ಶನ ನೀಡುತ್ತದೆ ಎಂದು ನಂಬಿರುವುದಾಗಿ ತಿಳಿಸಿದರು.
ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮೊರಾರಿ ಬಾಪು ರಾಮ್ ಅವರ ಕಥಾ ಕಾರ್ಯಕ್ರಮಕ್ಕೆ ಬರಲು ನಿಜವಾಗಿಯೂ ಸಂತೋಷವಾಗಿದೆ. ನಾನು ಇಂದು ಇಲ್ಲಿರುವುದು ಪ್ರಧಾನಿಯಾಗಿ ಅಲ್ಲ, ಹಿಂದೂವಾಗಿ ಎಂದರು. ರಿಷಿ ಸುನಕ್ ತನ್ನ ಬಾಲ್ಯದ ದಿನಗಳಲ್ಲಿ ಸೌತ್ ಹ್ಯಾಂಪ್ಟನ್ನಲ್ಲಿರುವ ದೇವಸ್ಥಾನಕ್ಕೆ ಒಡಹುಟ್ಟಿದವರೊಂದಿಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು.
ಭಗವಾನ್ ರಾಮನು ತನಗೆ ಸದಾ ಸ್ಪೂರ್ತಿಯಾಗಿರುತ್ತಾನೆ. ಬಾಪು ಅವರ ರಾಮಾಯಣದೊಂದಿಗೆ ಭಗವದ್ಗೀತೆ ಮತ್ತು ಹನುಮಾನ್ ಚಾಲೀಸಾವನ್ನು ಓದಿಕೊಂಡು ಬಂದಿದ್ದೇನೆ ಎಂದರು.`ಜೀವನದಲ್ಲಿನ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಮತ್ತು ನಿಸ್ವಾರ್ಥದಿಂದ ಕೆಲಸ ಮಾಡಲು ಶ್ರೀರಾಮ ನನಗೆ ಯಾವಾಗಲೂ ಸ್ಫೂರ್ತಿಯಾಗಿದ್ದಾರೆ’. ಮೊರಾರಿ ಬಾಪು ಅವರು ಸೋಮನಾಥ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ಶಿವಲಿಂಗವನ್ನು ರಿಷಿ ಸುನಕ್ ಅವರಿಗೆ ಕಾಣಿಕೆಯಾಗಿ ಕೊಟ್ಟರು.