CINE| ‘ವಿಕ್ರಂ’ ಸಿನಿಮಾ ಹಿಂದಿಕ್ಕಿದ ʻಜೈಲರ್ʼ: ದಾಖಲೆ ಬರೆದ ಸೂಪರ್ ಸ್ಟಾರ್ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಖತ್‌ ಸದ್ದು ಮಾಡುತ್ತಿದೆ. ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾದಾಗಿನಿಂದ ಯಾವುದೇ ಅಡೆತಡೆಗಳಿಲ್ಲದೆ ಮುನ್ನುಗ್ಗುತ್ತಿದ್ದು, ಕಮಲ್‌ ಹಾಸನ್‌ ಅಭಿನಯದ ವಿಕ್ರಂ ಸಿನಿಮಾ ದಾಖಲೆಯನ್ನು ಮುರಿದಿದೆ.

ಜೈಲರ್ ಚಿತ್ರ ಆರು ದಿನಗಳಲ್ಲಿ ಕಮಲ್ ಹಾಸನ್ ವಿಕ್ರಮ್ ಚಿತ್ರದ ದಾಖಲೆಯನ್ನು ದಾಟಿದೆ. ವಿಕ್ರಮ್ ಚಿತ್ರದ ಮೂಲಕ ಕಮಲ್ ಹಾಸನ್ ಗ್ರ್ಯಾಂಡ್ ಕಮ್ ಬ್ಯಾಕ್ ಕೊಟ್ಟಿದ್ದು ಗೊತ್ತೇ ಇದೆ. ವಿಕ್ರಮ್ ಚಿತ್ರದ ಸಂಪೂರ್ಣ ಕಲೆಕ್ಷನ್ 402 ಕೋಟಿ. ರಜನಿಕಾಂತ್ ಜೈಲರ್ ಆರು ದಿನಗಳಲ್ಲೇ ಈ ಕಲೆಕ್ಷನ್ ಗಳನ್ನು ದಾಟಿದೆ. ಈಗ ಇದರೊಂದಿಗೆ ತಮಿಳಿನಲ್ಲಿ ಮತ್ತೊಮ್ಮೆ ಕಮಲ್ ವರ್ಸಸ್ ರಜನಿ ಎಂಬ ಚರ್ಚೆ ನಡೆಯುತ್ತಿದೆ. ಜೈಲರ್ ಸಿನಿಮಾ ಈಗಾಗಲೇ ಅಮೆರಿಕದಲ್ಲೂ ಮೂರು ಮಿಲಿಯನ್ ಡಾಲರ್ ಕ್ಲಬ್ ಸೇರಿದೆ.

ತಮನ್ನಾ, ಕನ್ನಡದ ಸ್ಟಾರ್ ಹೀರೋ ಶಿವರಾಜ್ ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಜಾಕಿ ಶ್ರಾಫ್, ಸುನೀಲ್… ಮುಂತಾದ ಸ್ಟಾರ್ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೈಲರ್ ಚಿತ್ರ ಆರು ದಿನಗಳಲ್ಲಿ ವಿಶ್ವದಾದ್ಯಂತ 410 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!