ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರನ ಅಧ್ಯಯನಕ್ಕೆ ಹೊರಟಿರುವ ಚಂದ್ರಯಾನ-3 ನೌಕೆ ಚಂದ್ರನಿಗೆ ಇನ್ನೇನು ಸ್ವಲ್ಪವೇ ದೂರದಲ್ಲಿದೆ.
ಇಂದು ಬೆಳಗ್ಗೆ ಚಂದ್ರನ ಕಕ್ಷೆ ಇಳಿಸುವ ಕಡೆಯ ಹಂತದ ಪ್ರಯೋಗವೂ ಯಶಸ್ವಿಯಾಗಿದ್ದು, ಪ್ರೊಪಲ್ಷನ್ ಮಾಡ್ಯೂಲ್ ಹಾಗೂ ಲ್ಯಾಂಡರ್ ಮಾಡ್ಯೂಲ್ ಬೇರ್ಪಡಿಕೆಗೆ ತಯಾರಾಗಿದೆ.
ಈಗಾಗಲೇ ನೌಕೆ ಚಂದ್ರನ ಕಕ್ಷೆಯ ಸುತ್ತುವಿಕೆಯನ್ನು ನಿಲ್ಲಿಸಿದೆ. ಇನ್ನೊಂದೇ ವಾರದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಲ್ಯಾಂಡರ್ ಮಾಡ್ಯೂಲ್‌ನ್ನು ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ನಾಳೆ ಬೇರ್ಪಡಿಸಲು ನಿರ್ಧರಿಸಲಾಗಿದೆ. ನಂತರ ಲ್ಯಾಂಡರ್ ಸ್ವತಂತ್ರವಾಗಿ ಚಂದ್ರನ ಅಂಗಳಕ್ಕೆ ತೆರಳಲಿದೆ. ಆ.23ರಂದು ಸಾಫ್ಟ್ ಲ್ಯಾಂಡಿಂಗ್ ಆಗಲಿದೆ ಎಂದು ಇಸ್ರೋ ಹೇಳಿದೆ.
Chandrayaan-3 Mission:
Today’s successful firing, needed for a short duration, has put Chandrayaan-3 into an orbit of 153 km x 163 km, as intended.
With this, the lunar bound maneuvres are completed.
It’s time for preparations as the Propulsion Module and the Lander Module… pic.twitter.com/0Iwi8GrgVR
— ISRO (@isro) August 16, 2023