ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿರತೆ ಟಾರ್ಗೆಟ್ ತಪ್ಪಾಗೋ ಮಾತೇ ಇಲ್ಲ. ಒಂದು ಸಲ ಗುರಿಯಿಟ್ಟ ಮೇಲೆ ಬೇಟಯಾದಡೆ ಬಿಡುವ ಜಾಯಮಾನ ಚಿರತೆಯದ್ದಲ್ಲ. ಅಂತಹ ರಣಬೇಟೆಗಾರರನ್ನೇ ಕೋತಿಗಳು ಓಡಿಸಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ದೃಶ್ಯದಲ್ಲಿ ರಸ್ತೆ ಮೇಲಿದ್ದ ಬಬೂನ್ ಕೋತಿ ಮೇಲೆ ಚಿರತೆ ದಾಳಿ ಮಾಡಿದೆ. ಕೂಡಲೇ ಅಲ್ಲಿದ್ದ ಕೋತಿಗಳ ತಂಡ ಚಿರತೆ ಮೈಮೇಲೆಗೆ ದಾಳಿ ಮಾಡಿವೆ. ಅವರ ದಾಳಿಯನ್ನು ತಡೆದುಕೊಳ್ಳಲಾಗದೆ ಚಿರತೆ ಅಲ್ಲಿಂದ ಓಡಿಹೋಗಿದೆ. ಆದರೂ ಬೆಂಬಿಡದೆ ಬಬೂನ್ ಕೋತಿಗಳೂ ಕೂ ಚಿರತೆಯ ಹಿಂದೆ ಓಡಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಿದ ನೆಟ್ಟಿಗರು ಬಬೂನ್ ಕೋತಿಗಳ ಏಕತೆಯನ್ನು ಕೊಂಡಾಡುತ್ತಿದ್ದಾರೆ.