ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಗೆ ಹೈಕೋರ್ಟ್ ತಡೆ ನೀಡಿದ್ದು, ಆದ್ರೆ ಮತ್ತೆ ಸಂಕಷ್ಟ ಎದುರಾಗಿದ್ದು, ಉಪೇಂದ್ರರನ್ನು ಬಂಧಿಸಬೇಕು ಎಂದು ಕರ್ನಾಟಕ ರಣಧೀರ ಪಡೆ ಪಟ್ಟು ಹಿಡಿದಿದೆ.
ನಾನು ದೂರು ಕೊಟ್ಟು 48 ಗಂಟೆಯಾದರೂ ಇನ್ನೂ ಯಾಕೆ ಅವರನ್ನು ಬಂಧಿಸಿಲ್ಲ, ಉಪೇಂದ್ರರನ್ನು ಈ ಕೂಡಲೇ ಬಂಧಿಸಿ ಎಂದು ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಆಗ್ರಹಿಸಿದ್ದಾರೆ.
ಕೋರ್ಟ್ ಮೂಲಕ ಸ್ಟೇ ತಂದಿದ್ದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ವ್ಯಾಪ್ತಿಗೆ, ನಾನು ದೂರು ನೀಡಿದ್ದು ಹಲಸೂರು ಗೇಟ್ ಠಾಣೆಗೆ, ನಾನು ನೀಡಿರುವ ದೂರಿಗೆ ಯಾವುದೇ ಸ್ಟೇ ತಂದಿಲ್ಲ. ನಟ ಉಪೇಂದ್ರರನ್ನು ಯಾಕೆ ಬಂಧಿಸಿಲ್ಲ.? ಈ ಕೂಡಲೇ ಬಂಧಿಸಿ ಎಂದು ಭೈರಪ್ಪ ಹರೀಶ್ ಆಗ್ರಹಿಸಿದ್ದಾರೆ.
ನಟ ಉಪೇಂದ್ರ ಅವರು ತಮ್ಮ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಎಫ್ ಐಆರ್ ದಾಖಲಿಸದಂತೆ ತಡೆ ನೀಡಿದೆ.